ಭಟ್ಕಳ: ತಾಲೂಕಿನ ಕಟಗಾರಕೊಪ್ಪ ಹಾಗೂ ಶಿರಾಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿಷ ಆಹಾರ ಸೇವಿಸಿದ ಪರಿಣಾಮ 30ಕ್ಕೂ ಅಧಿಕ ಜಾನುವಾರುಗಳು ಮೃತಪಟ್ಟಿರುವ ಘಟನೆ ನಡೆದಿದೆ.

ಕಟಗಾರಕೊಪ್ಪ ಹಾಗೂ ಶಿರಾಲಿ ಗ್ರಾಮಪಂಚಾಯತ್ ವ್ಯಾಪ್ತಿಯ ಗಡಿ ಭಾಗದಲ್ಲಿ ಹಂದಿಸಾಕಣೆ ಕೇಂದ್ರವಿದ್ದು ಹಂದಿಗಳಿಗೆ ಹಾಕುವ ಆಹಾರವನ್ನು ತಿಂದು ಆ ಭಾಗದ ಜಾನುವಾರುಗಳು ಸಾವನ್ನಪ್ಪಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

RELATED ARTICLES  ಸಿಡಿಲು ಬಡಿದು ಆಕಳು ಸಾವು

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಾಲೂಕು ಪಶುವೈದ್ಯಾಧಿಕಾರಿ ಡಾ.ಪ್ರದೀಪ್ ಮೇಲ್ನೋಟಕ್ಕೆ ಜಾನುವಾರಗಳ ಸಾವು ವಿಷ ಆಹಾರ ಸೇವೆನೆಯಿಂದ ಉಂಟಾಗಿರಬಹುದೆಂದು ಅಂದಾಜಿಸಲಾಗಿದ್ದು ಮರಣೋತ್ತರ ವರದಿಯ ನಂತರವಷ್ಟೆ ನಿಖವಾದ ಕಾರಣ ತಿಳಿದುಬರುತ್ತದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

RELATED ARTICLES  ಸಂಧ್ಯಾ ಭಟ್ ಗೆ ಹಣ್ಣು ವಿಜ್ಞಾನದಲ್ಲಿ ಡಾಕ್ಟರೇಟ್

ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಒಂದೆರಡರು ಜಾನುವಾರುಗಳು ಸಾಯುತ್ತಲೇ ಬಂದಿದ್ದು ಈಗ ಒಂದೇ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳು ಮೃತಪಟ್ಟಿದ್ದು ಈ ಭಾಗದ ರೈತರಿಗೆ ತುಂಬಲಾರದ ನಷ್ಟವುಂಟಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.