ಕುಮಟಾ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಯವರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.

ಅವರು ಇಂದು ಅಘನಾಶಿನಿ, ಮೊಸಳೆಸಾಲ, ಕಾಗಾಲ, ಗುಡೇಅಂಗಡಿ, ಹೊಲನಗದ್ದೆ, ಕಡ್ಲೆ, ಲುಕ್ಕೇರಿ ಹಾಗೂ ಮಾಸೂರು ಭಾಗದಲ್ಲಿ ಪ್ರಚಾರ ನಡೆಸಿದರು.

RELATED ARTICLES  ಶ್ರೀ ಕ್ಷೇತ್ರ ಸಿಗಂದೂರ ಚೌಡೇಶ್ವರಿ ದೇವಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ಉಪೇಂದ್ರ ಪೈ

ಪ್ರಚಾರ ದುದ್ದಕ್ಕೂ ಪಕ್ಷದ ಶಕ್ತಿಕೇಂದ್ರದ ಅಧ್ಯಕ್ಷರು ಪದಾಧಿಕಾರಿಗಳು, ಎಲ್ಲ ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು.

ಎಲ್ಲ ಕಾರ್ಯಕ್ರಮಗಳಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಜನರಿಂದ ಗೆಲ್ಲಿಸಿ ವಿಧಾನಸಭೆಗೆ ಮತ್ತೊಮ್ಮೆ ಕಳುಹಿಸುವ ಅಭಿಪ್ರಾಯ ವ್ಯಕ್ತವಾಗಿದೆ.ಜನ ಮಾನಸ ಅರಿಯಲು ಇನ್ನೂ ಕೆಲ ದಿನ ಕಾಯ ಬೇಕಾಗಿದೆ.

RELATED ARTICLES  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ಸಾಧನೆ.

ತಾ ಪಂ ಮಾಜಿ ಸದಸ್ಯೆ ವೀಣಾ ಭಟ್ಟ, ನಾಗೇಶ ನಾಯ್ಕ, ಕೇಶವ ಪಟಗಾರ, ಶ್ರೀಕಾಂತ್ ನಾಯ್ಕ, ಗಿರೀಶ್ ಹರಿಕಾಂತ ಇತರರು ಉಪಸ್ಥಿತರಿದ್ದರು