ನವದೆಹಲಿ: ಹೆರಿಗೆಯಾದ ನಂತರ ಹೆಂಗಳೆಯರಿಗೆ ತಮ್ಮ ದೇಹತೂಕವನ್ನು ಕಡಿಮೆ ಮಾಡಿ ಮೊದಲಿನಂತೆ ದೇಹದ ಸೌಂದರ್ಯ ಕಾಪಾಡುವುದು ಹೇಗೆ ಎಂಬ ಚಿಂತೆಯಾಗುತ್ತದೆ. ಇದಕ್ಕೆ ಸಮತೂಕದ ಡಯಟ್ ಮಾಡಬೇಕು ಅಲ್ಲದೆ ವ್ಯಾಯಾಮ, ದೇಹದ ಕಸರತ್ತು, ಏರೊಬಿಕ್ಸ್ ಗಳನ್ನು ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.

ಹೆರಿಗೆಯಾದ ನಂತರ ಮಹಿಳೆಯರು ಎಂತಹ ಆಹಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಪೌಷ್ಟಿಕಾಂಶ ತಜ್ಞೆ ರಿಯಾ ವಾಹಿ ಮತ್ತು ಫಿಟ್ ನೆಸ್ ತಜ್ಞೆ ತರ್ವಿನ್ ದೆದ್ಹಾ ಪಟ್ಟಿ ಮಾಡಿದ್ದಾರೆ. ಮಹಿಳೆಯರ ಡಯಟ್ ನಲ್ಲಿ ಹಣ್ಣು, ತರಕಾರಿಗಳು, ಇಡಿ ಧಾನ್ಯಗಳು, ಮೀನು, ಸೊಯಾ ಆಹಾರಗಳು ಮತ್ತು ತೆಳು ಮಾಂಸಗಳನ್ನು ಒಳಗೊಂಡಿರಬೇಕಾಗುತ್ತದೆ. ಕೆನೆರಹಿತ ಅಥವಾ ಕಡಿಮೆ ಕೊಬ್ಬಿನ ಹಾಲನ್ನು ಆರಿಸಿ. ಕಬ್ಬಿಣವನ್ನು ಒಳಗೊಂಡಿರುವ ಲೀಫಿ ಗ್ರೀನ್ಸ್ ಸಹ ಒಳ್ಳೆಯದು.

ಶಸ್ತ್ರಕ್ರಿಯೆ ಮೂಲಕ ಅಥವಾ ಸಿ-ಸೆಕ್ಷನ್ ಮೂಲಕ ಹೆರಿಗೆಯಾದ ಮಹಿಳೆಯರ ಗಾಯವನ್ನು ನಿವಾರಿಸಲು ಸಿ ವಿಟಮಿನ್ ಸಹಾಯವಾಗುತ್ತದೆ.

ಇಡಿ ಧಾನ್ಯಗಳು, ಬೀಜಗಳು ಕೂಡ ಒಳ್ಳೆಯದು. ಇಡಿ ಧಾನ್ಯಗಳ ಜೊತೆ ಕೆನೆರಹಿತ ಹಾಲು ಕುಡಿಯಬೇಕು, ಅಣಬೆ ಜೊತೆಗೆ ಬೇಯಿಸಿದ ಮೊಟ್ಟೆ, ಕಡಿಮೆ ಕೆನೆಯಿರುವ ಚೀಸ್, ಹಣ್ಣು ಮತ್ತು ಮೊಸರು ಕೂಡ ಉತ್ತಮ.

ವ್ಯಾಯಾಮ, ಕಸರತ್ತು: ಮಹಿಳೆಯರಿಗೆ ಹೆರಿಗೆಯಾದ ನಂತರ ನಿಯಮಬದ್ಧವಾದ ದೈಹಿಕ ವ್ಯಾಯಾಮ, ಕಸರತ್ತು ಕೂಡ ಮಾಡಬೇಕಾಗುತ್ತದೆ. ದೇಹದ ಪ್ರತಿಯೊಂದು ಅಂಗಕ್ಕೂ ವ್ಯಾಯಾಮ ಸಿಗಬೇಕಾಗುತ್ತದೆ. ಆರೋಬಿಕ್ಸ್, ಧ್ಯಾನ, ಯೋಗ, ವ್ಯಾಯಾಮಗಳು, ನಿಯಮಿತಿ ನಡಿಗೆ ಕೂಡ ಮಹಿಳೆಯರಿಗೆ ತೂಕ ಕಳೆದುಕೊಳ್ಳಲು ಸಹಾಯವಾಗುತ್ತದೆ.