ಭಟ್ಕಳ: ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣೆ ಕಣದಲ್ಲಿರುವ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಮಾಂಕಾಳು ವೈದ್ಯರ ಪರ ಭರ್ಜರಿ ಬ್ಯಾಟಿಂಗ್ ನಡೆಸಿದರು. ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಭೇಟಿ ನೀಡಿ ಮಾಂಕಾಳರಿಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಮನವಿಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿಥ್ಯನಾತ್ ರಾಜ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಿರುವದನ್ನು ಟೀಕಿಸಿ, ಸ್ವತಃ ತನ್ನ ಕ್ಷೇತ್ರದಲ್ಲೆ ಗೆಲುವು ಸಾಧಿಸಲಿಕ್ಕೆ ಆಗದ ವ್ಯಕ್ತಿಯೊಬ್ಬರು ಕರ್ನಾಟಕಕ್ಕೆ ಬಂದು ಪ್ರಚಾರ ಮಾಡುವುದರಲ್ಲಿ ಅರ್ಥವಿಲ್ಲ ಎಂದರು. ಯೋಗಿ ಎರಡನೇ ಬಾರಿಗೆ ಕರ್ನಾಟಕದಲ್ಲಿ ಪ್ರಚಾರ ಮಾಡಲು ಬಂದಿದ್ದು ಅವರ ಮಾತುಗಳಿಗೆ ರಾಜ್ಯದ ಮತದಾರರು ಯಾವುದೆ ಬೆಲೆ ನೀಡುವುದಿಲ್ಲ ಅವರು ಭಾಷಣದ ಪ್ರಭಾವ ಇಲ್ಲಿ ಆಗುವುದಿಲ್ಲ ಎಂದರು. ಬಿಜೆಪಿಯವರಿಗೆ ದಲಿತರು, ಹಿಂದುಳಿದವರ ಬಗ್ಗೆಯ ಯಾವುದೇ ಚಿಂತೆಯಿಲ್ಲ. ದಲಿತರ ಮನೆಗೆ ಹೋಗಿ ಫೈವ್ ಸ್ಟಾರ್ ಹೋಟೆಲ್ ಗಳಿಂದ ತಿಂಡಿ ತರಿಸಿ ತಿನ್ನುವ ಯೋಗಿ ರಾಜ್ಯದ ಮಂತ್ರಿಗೆ ದಲಿತ ಕುರಿತು ಕಿಂಚಿತ್ತೂ ಕಾಳಜಿಯಿಲ್ಲ , ಕಳೆದ 35 ವರ್ಷಗಳಿಂದ ರಾಮನಾಮ ಜಪಿಸುತ್ತ ರಾಮನಾಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಅವರು, ಈ ಬಾರಿ ಮತ್ತೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ರಚನೆಯಾಗುತ್ತೆ ಎಂಬ ಭವಿಷ್ಯವನ್ನು ಅವರು ಈ ಸಂದರ್ಭದಲ್ಲಿ ಭಟ್ಕಳದ ಜನತೆಗೆ ನೀಡಿದರು.

RELATED ARTICLES  ದನದ ಚರ್ಮ ಸಾಗಾಣ ಮಾಡುತಿದ್ದ ವಾಹನ ವಶಕ್ಕೆ!

ಈ ಸಂದರ್ಭದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಮಾಂಕಾಳ್ ವೈದ್ಯ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ್, ಸದಸ್ಯ ಅಲ್ಬರ್ಟ ಡಿಕೋಸ್ತಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠಲ್ ನಾಯ್ಕ, ಪ್ರಚಾರ ಸಮಿತಿಯ ನಾರಾಯಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES  ಯಲ್ಲಾಪುರ ಸಮೀಪ ಭೀಕರ ಅಪಘಾತ: ಸ್ಥಳದಲ್ಲೇ ಮಹಿಳೆ‌ ಸಾವು.