ಕಾರವಾರ: ಇಲ್ಲಿನ ಕೈಗಾದ ರೋಲರ್ ಸ್ಕೇಟಿಂಗ್ ಕ್ಲಬ್ ನ 32 ಪುಟಾಣಿಗಳು (10 ವರ್ಷದ ಒಳಗಿನವರು) ಸತತ 9೦ ನಿಮಿಷಗಳವರಗೆ ಫಾರ್ವರ್ಡ್ ಲಿಂಬೋ ಸ್ಕೇಟಿಂಗ್ ಮಾಡಿ ರೆಕಾರ್ಡ್ ಹೋಲ್ಡರ್ ಆಫ್ ಯುಕೆಯಲ್ಲಿ ನೋಂದಾವಣಿ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಆ ಮೂಲಕ ಚೀನಾದ 26 ಮಕ್ಕಳು ಅನೇಕ ವರ್ಷಗಳ ಹಿಂದೆ ಮಾಡಿದ್ದ ವಿಶ್ವ ದಾಖಲೆಯನ್ನು ಇವರು ಹಿಂದಿಕ್ಕಿದ್ದಾರೆ.
ಕೈಗಾ ವಸತಿ ಸಂಕೀರ್ಣದ ಸ್ಕೇಟಿಂಗ್ ಅಂಕಣದಲ್ಲಿ ಈ ವಿಶೇಷ ಲಿಂಬೋ ಸ್ಕೇಟಿಂಗ್ ಪ್ರದರ್ಶನ ಜರುಗಿತು. ಈ ಪುಟಾಣಿಗಳು ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್ ನ ದಿಲೀಪ್ ಹನಬರ್ ಅವರ ಬಳಿ ಪ್ರತಿದಿನ ಎರಡು ಗಂಟೆಗಳ ಕಾಲ ಸತತ ತರಬೇತಿ ಪಡೆದಿದ್ದರು.
*ದಾಖಲೆ ನಿರ್ಮಿಸಿದ ಪುಟಾಣಿಗಳ ವಿವರ ಇಂತಿದೆ:* ಆಧ್ಯಾ ಮಂಜಪ್ಪ ನಾಯ್ಕ, ಆದಿತ್ಯಾ ದತ್ತಾತ್ರೆಯ ನಾಯ್ಕ, ಆದಿತ್ಯಾ ಮಹಾಂತೇಶ ಹಿರೇಮಠ್, ಅದ್ವಿಕಾ ಮಂಜುನಾಥ ಸ್ವಾಮಿ, ಆಧ್ಯಾ ಮಂಜುನಾಥ ಸ್ವಾಮಿ, ಐರಾ ಸಂಜೀವಕುಮಾರ ಘಟಕಾಂಬಳೆ, ಅಕ್ಷಯ ಹೇಮಂತ ಸಿರ್ಸಿಕರ್, ಅಮನ್ ರೂಪೇಶ್ ಫಂಡೇಕರ್, ಅಮೋದ್ ಪ್ರಮೋದ ನೇತ್ರೆಕರ್, ಅನುಪ್ ಙನೆಶ್ವರ್ ಗುನಗಿ, ಅನ್ವಿ ಸಂಜಯ್ ಕುಡ್ತರ್ಕರ್, ಆಪೂರ್ವ ಅನಿಲ್ ಭುಜಲೇ, ಅವಿಜೀತ್ ಮಂಜುನಾಥ ದೇಸಾಯಿ, ಬಿ. ರೊಹನ್ ನಾಗಭೂಷಣಂ, ಬ್ರಂದಾವನಿ ರಾಜಶೇಖರ್ ಅಬ್ಬಿಗೇರಿ, ಜ್ನಾವಿ ಮನೋಜ, ಮಹೋಮದ್ದ ಸುಫಿಯಾನ್ ಶರಿಫ್, ಮಹೋಮದ್ದ ಶಾಕ್ಬಿ, ಮೋಹನ ಹನುಮಂತರಾಯಪ್ಪ, ಮುಕುಂದ ಸರ್ವಣಾ, ನಿಜಗುಣ ಮನೋಹರ್ ಪತ್ತಾರ್, ಪ್ರೇಮ ಸುರಜಪ್ರಕಾಶ ಬನವಳಿ, ಪ್ರಿಯದರ್ಶಿನಿ ಮಹಾಂತೇಶ ಹಿರೇಮಠ್, ಸಾತ್ವಿಕ ಮಹಾಂತೇಶ ನಲವ್ತವಾಡ, ಶುಬಿಕುಮಾರಿ ಮುಕುಂದಲಾಲ್ ದಾಸ್, ಶ್ಯಾಮ್ ಸುಮಂತ್ ಹೇಬ್ಬಳೇಕರ್, ಸಿಂಚನಾ ಮಹಾಂತೇಶ ಸಜ್ಜನ್, ಸೊಹಂ ಸತೀಶ್ ತೆಂಡುಲ್ಕರ್, ಸೊನಲ್ ಸತೀಶ್ ನಾಯ್ಕ, ಶ್ರುಷ್ಠಿ ಶಿವಾನಂದ ನಾಯ್ಕ, ಸುತೇಜ್ ಸಿಗಳ್ಳಿ ಗೌಡಾ, ಟಿ. ಯಶವಂತ ಬಾಲಾಜಿ ಈ ದಾಖಲೆ ನಿರ್ಮಿಸಿದ್ದಾರೆ.
ಈ ದಾಖಲೆಯನ್ನು ದಾಖಲಿಸಲು ರೆಕಾರ್ಡ್ಸ್ ಹೋಲ್ಡರ್ ರಿಪಬ್ಲಿಕನ್ ಆಫ್ ಯುಕೆಯ ಉಪಾಧ್ಯಕ್ಷ ಕಪಿಲ್ ಕಾರ್ಲಾ ಆಗಮಿಸಿದ್ದರು.
ಕೈಗಾ ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ಸಂಜೀವ್ ಕುಮಾರ್, ನಿರ್ದೇಶಕ ಜಿ.ಆರ್.ದೇಶಪಾಂಡೆ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಶ್ರೀನಿವಾಸ್ ರಾವ್, ಕೈಗಾ ರೋಲರ್ ಕ್ಲಬ್ ನ ಅಧ್ಯಕ್ಷ ಶೇಷಯ್ಯ, ಮುಖ್ಯಾಧಿಕಾರಿ ಸುಬ್ಬರಾವ್, ಶ್ರೀಕುಮಾರ್ ಹಾಗೂ ಕೇಂದ್ರೀಯ ಕೈಗಾ ವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿ, ಪೋಷಕರು ಇದ್ದರು.