ಕುಮಟಾ: ಇಂದು ದಿವಗಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನೂರಕ್ಕೂ ಹೆಚ್ಚಿನ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು.
ಚುನಾವಣೆ ಸಮೀಪಿಸಿರುವಂತೆಯೇ ಈ ರೀತಿಯಾಗಿ ಪಕ್ಷ ಸೇರ್ಪಡೆಯಾಗಿರುವುದು ಬಿಜೆಪಿಗೆ ಇನ್ನಷ್ಟು ಬಲ ತಂದಿದೆ. ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರು ಮಾತನಾಡಿ ದಿವಗಿಯಲ್ಲಿ ತಾನು ಶಾಸಕನಾಗಿದ್ದ ಅವಧಿಯಲ್ಲಿ, ಬಿಜೆಪಿ ಸರ್ಕಾರ ಇರುವಾಗ ಮಾಡಿದ ಹಲವಾರು ಅಭಿವೃದ್ಧಿ ಕೆಲಸಗಳ ಕುರಿತು ಜನರಿಗೆ ನೆನಪು ಮಾಡಿಕೊಟ್ಟರು.
ಚುನಾವಣೆ ಸಂದರ್ಭದಲ್ಲಿ ಸಂಘದ ಸಾಲ ಮನ್ನಾ ಮಾಡುತ್ತೆವೆ ಎಂದು ಹೇಳುವವರು ಅನೇಕರಿದ್ದಾರೆ. ಮೇ 10ರ ಒಳಗೆ ಸಾಲ ಮನ್ನಾ ಮಾಡಿದ ಬಗ್ಗೆ ಅಧಿಕೃತ ದಾಖಲೆ ಪತ್ರಗಳನ್ನು ಪಡೆಯಿರಿ ಅದನ್ನ ಬಿಟ್ಟು ಚುನಾವಣೆ ಫಲಿತಾಂಶದ ನಂತರ ಸಾಲ ಮನ್ನಾ ಮಾಡುವ ಬದಲು 16% ಬಡ್ಡಿ ದರದಲ್ಲಿ ಚಕ್ರ ಬಡ್ಡಿ ವಸೂಲಿ ಮಾಡುವ ಮೂಲಕ ನಿಮಗೆ ಮಂಗ ಮಾಡುವ ಜನರು ಇದ್ದಾರೆ ಎಚ್ಚರಿಕೆ ಎಂದರು. ಡಾ. ಜಿ.ಜಿ. ಹೆಗಡೆ ತಮ್ಮ ಸ್ವ ಹಿತಕ್ಕಾಗಿ ಡೊಂಗಿ ಹಿಂದುತ್ವ ಮಾಡುವವರನ್ನು ಬೆಂಬಲಿಸದಿರಿ ಎಂದು ಹೇಳಿದರು.
ಒಂದೆಡೆ ಚುನಾವಣಾ ಕಣ ರಂಗೇರುತ್ತಿದ್ದರೆ ಇನ್ನೊಂದೆಡೆ ಪಕ್ಷ ಸೇರ್ಪಡೆ ಹಾಗೂ ಕಾರ್ಯಕರ್ತರ ಬಲ ಹೆಚ್ಚಳಕ್ಕೆ ಪ್ರಯತ್ನ ನಡೆದಿದೆ.