ಶಿರಸಿ : ಚುನಾವಣೆ ಹತ್ತಿರ ಬರುತ್ತಿದ್ದಂತೆ ದಿನದಿಂದ ದಿನಕ್ಕೆ ವಿವಿಧ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದ್ದು , ಮೊದಲಿನಿಂದಲೂ ಪ್ರಚಾರ ಕಾರ್ಯಕ್ರಮದಲ್ಲಿ ಮುಂದಿರುವ ಜೆಡಿಎಸ್ ನಗರದ ವಿವಿಧ ಕಡೆಗಳಲ್ಲಿ ಮನೆ ಹಾಗೂ ಅಂಗಡಿಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಇಲ್ಲಿನ ಮಾರಿಗುಡಿ ದೇವಸ್ಥಾನದಿಂದ ಹೊರಟ ಜೆಡಿಎಸ್ ಪ್ರಮುಖರ ಹಾಗೂ ಪದಾಧಿಕಾರಿಗಳ ತಂಡ ಶಿವಾಜಿ ಚೌಕ, ಬಸ್ ಸ್ಟಾಂಡ್ ಸರ್ಕಲ್, ಸಿಪಿ ಬಝಾರ,
ದೇವಿಕೆರೆ, ಹೊಸಪೇಟೆ ರಸ್ತೆ , ಅಶ್ವಿನಿ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಅಂಗಡಿ ಹಾಗೂ ಮನೆಗಳಿಗೆ ಭೇಟಿ ನೀಡಿ, ಸಾರ್ವಜನಿಕರನ್ನು ಸಂಪರ್ಕಿಸಿ ಪ್ರಚಾರ ನಡೆಸಿದರು.
ಪ್ರಚಾರ ಕಾರ್ಯದಲ್ಲಿ ಚುನಾವಣಾ ಆಯೋಗದಿಂದ ಅಧಿಕೃತ ಪರವಾನಿಗೆ ಇರುವ ವಾಹನದಲ್ಲಿ ಜೆಡಿಎಸ್ ಪರವಾದ ಘೋಷಣೆ ಮಾಡುತ್ತಾ, ಅದರ ಜೊತೆಯಲ್ಲಿ ಜೆಡಿಎಸ್ ಪದಾಧಿಕಾರಿಗಳು ಮನೆ ಮನೆ ಪ್ರಚಾರವನ್ನೂ ಸಹ ನಡೆಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸುಭಾಶ್ ಮಂಡೂರು, ಗಣಪತಿ ಜೊಗಳೇಕರ,ಸಯ್ಯದ್ ಮುಜಿಬ್, ನಾರಾಯಣ ನಾಯ್ಕ, ವಾಮನ್ ಮಾಡಿಗೆರೆ, ಚಂದ್ರು ನಾಯ್ಕ,ಶಂಕರ ಪಟಗಾರ, ಜಗದೀಶ್ ಸಾಗರ, ಮೇರಿ ಡೀಸೋಜಾ, ದೀಕ್ಷಾ ಪಾಠಣಕರ, ನಾರಾಯಣ ಬಿ ನೇತ್ರೆಕರ, ಮೋಹನ್ ಆಚಾರಿ, ನಹಿಮ್ ಶುಂಠಿ, ನೌಷಾದ ಬಿಳಗಿ, ಸಂತೋಷ ಗೌಡ, ಅಶೋಕ , ರಮೇಶ್ ಕಲ್ಗುಟ್ಕರ್, ನಿಖಿಲ್ ಶೆಟ್ಟಿ, ಮುಂತಾದವರು ಭಾಗವಹಿಸಿದ್ದರು