ಕುಮಟಾ: ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಉದ್ಯಮಿ ಹಾಗೂ ಬಿಜೆಪಿ ಮುಖಂಡ ಸುಬ್ರಾಯ ವಾಳ್ಕೆ ಯವರ ಜೊತೆ ಶುಕ್ರವಾರ ಸಂಜೆ ಯಾಣ, ಬೆಳ್ಳಂಗಿ, ಸಂಡಳ್ಳಿ, ಶಿರಗುಂಜಿ, ಉಪ್ಪಿನಪಟ್ಟಣ ಭಾಗದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಗಜಾನನ ಪೈ ಹಾಗೂ ಬೂತ್ ಅಧ್ಯಕ್ಷರು, ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಅಬ್ಬರದ ಪ್ರಚಾರ ಸಭೆ ನಡೆಸಿದರು.
ಪ್ರತಿಯೊಂದು ಭಾಗದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಎಲ್ಲ ಕಡೆಯಲ್ಲಿಯೂ ಜನರು ಗಜಾನನ ಪೈ ಯವರನ್ನು ಗೆಲ್ಲಿಸಿದಂತೆಯೇ ನಮ್ಮ ನಮ್ಮ ಭಾಗದಲ್ಲಿ ಹೆಚ್ಚಿನ ಮತ ನೀಡುತ್ತೇವೆ.. ಈ ಬಾರಿ ಬಿಜೆಪಿ ಸರ್ಕಾರ ಬರಬೇಕು ಎಂದರು..