ಮಂಡ್ಯ: ಅಕ್ರಮವಾಗಿ ಇಟ್ಟಿದ್ದ 20 ಲಕ್ಷಕ್ಕೂ ಹೆಚ್ಚು ಹಣ ಮತ್ತು ಅಪಾರ ಪ್ರಮಾಣದ ಮದ್ಯವನ್ನು ಚುನಾವಣೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪಾಂಡವಪುರದಲ್ಲಿ ಕೃಷ್ಣ ನಗರದ ಚಿಟ್ಟನಹಳ್ಳಿ ಮಹೇಶ್ ಎಂಬವರ ಮನೆಯಲ್ಲಿ ಹಣ ಪತ್ತೆಯಾಗಿದ್ದು, ಚುನಾವಣೆ ಅಧಿಕಾರಿಗಳು ಮತ್ತು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

RELATED ARTICLES  ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಉಮೇಶ್ ಕತ್ತಿ ಇನ್ನಿಲ್ಲ.

ಚಿಟ್ಟನಹಳ್ಳಿ ಮಹೇಶ್‌ ಮೇಲುಕೋಟೆಯ ಸ್ವರಾಜ್‌ ಇಂಡಿಯಾ ಅಭ್ಯರ್ಥಿ ದರ್ಶನ್‌ ಪುಟ್ಟಣಯ್ಯ ಅವರ ಬೆಂಬಲಿಗ ಎನ್ನಲಾಗಿದೆ.

ಇನ್ನು ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರ ಆಪ್ತ ನಾರಾಯಣ ಗೌಡ ಎಂಬವರ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಕೇವಲ ಎರಡು ಸಾವಿರ ಹಣ ಸಿಕ್ಕಿದೆ.

RELATED ARTICLES  ಕನ್ನಡನಾಡಿಗೆ ಅವಮಾನ ಮಾಡಿದರಾ ಲಕ್ಷ್ಮೀ ಹೆಬ್ಬಾಳ್ಕರ್?