ಕುಮಟಾ: ಕುಮಟಾ ಹೊನ್ನಾವರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೂರಜ್ ನಾಯ್ಕ ಸೋನಿಯವರು ಇಂದು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಆಟೋ ರಿಕ್ಷಾವನ್ನು ಗೆಲುವಿನೆಡೆಗೆ ಕೊಂಡೊಯ್ಯಲು ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸುತ್ತಿದ್ದರೆ ಎನ್ನಲಾಗಿದೆ.

ಯುವ ಪಡೆಯೊಂದಿಗೆ ತಮ್ಮ ಕ್ಚೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಸೂರಜ್ ‌ನಾಯ್ಕ ಸೋನಿಯವರಿಗೆ ಜನತೆ ಉತ್ತಮ‌ ಸ್ಪಂದನೆ‌ ನೀಡುತ್ತಿದ್ದಾರೆ. ಆಟೋ ರಿಕ್ಷಾದಲ್ಲಿಯೇ ತೆರಳಿ ಪ್ರಚಾರ ನಡೆಸಲಾಗುತ್ತಿದೆ.

RELATED ARTICLES  ಕರೋನಾ ಎಫೆಕ್ಟ್ಸ್: ನಾಳೆಯಿಂದ ಒಂದು ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಬಂದ್

ಇಂದು ಕುಮಟಾದ ಪಟ್ಟಣ ಹಾಗೂ ಸುತ್ತಲ ಪ್ರದೇಶದ ಭಾಗದಲ್ಲಿ ಸೂರಜ್ ನಾಯ್ಕ ಸೋನಿಯವರ ಕುರಿತಾಗಿ ಭರದ ಪ್ರಚಾರ ನಡೆಸಲಾಯಿತು. ಕಾರ್ಯಕರ್ತರು ತಂಡ ತಂಡಗಳಲ್ಲಿ ತೆರಳಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು.

ಈ ಬಾರಿ ಶತಾಯ ಗತಾಯ ಪ್ರಯತ್ನ‌ಮಾಡಿ ಸೂರಜ್ ನಾಯ್ಕ ಅವರನ್ನು ಗೆಲ್ಲಿಸಲೇ ಬೇಕೆಂದು ಕಾರ್ಯಕರ್ತರು ಶ್ರಮ ವಹಿಸಿದ್ದಾರೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ಸೂರಜ್ ನಾಯ್ಕ ಸೋನಿಯವರು ಹಿಂದುತ್ವಕ್ಕೆ ಹಾಗೂ ಗೋ ರಕ್ಷಣೆಯ ಕುರಿತಾಗಿ ಹೋರಾಟ ಮಾಡಿದ್ದು ಅವರನ್ನು ನಾವು ಬೆಂಬಲಿಸುವುದಾಗಿ ಅನೇಕ ಕಾರ್ಯಕರ್ತರು ತಿಳಿಸಿದ್ದಾರೆ. ಸೋನಿಯವರ ಹೋರಾಟ ಪ್ರವೃತ್ತಿಯೇ ಅವರಿಗೆ ಬಲ ಎಂಬುದಾದರೂ ಜನತೆಯ ಮನ‌ ತೂಗಲು ಚುನಾವಣಾ ಪರಿಣಾಮವೇ ಬರಬೇಕಾಗಿದೆ.