ಹೊನ್ನಾವರ: ಚುನಾವಣಾ ಸಮಯ ಸಮೀಪಿಸುತ್ತಿದೆ .ಎಲ್ಲೆಡೆ ಚುನಾವಣಾ ಪ್ರಚಾರದ ಭರಾಟೆಯೂ ಸಾಗುತ್ತಿದೆ .ಇದೇ ಸಂದರ್ಭದಲ್ಲಿ ಪ್ರಸಿದ್ಧ ವ್ಯಕ್ತಿಗಳು ಸ್ಟಾರ್ ಕ್ಯಾಂಪೇನ್ ರೀತಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಆಯಾಯ ಕ್ಷೇತ್ರದ ಅಭ್ಯರ್ಥಿಗಳ ಕುರಿತಾಗಿ ಮಾತ ಬೇಟೆ ಪ್ರಾರಂಭಿಸಿದ್ದಾರೆ. ಅದೇ ರೀತಿ ಭಟ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸುನಿಲ್ ನಾಯ್ಕ ಅವರ ಪರವಾಗಿ ಶಾಸ್ತ್ರಿ ದಂಪತಿಗಳು ಚುನಾವಣಾ ಪ್ರಚಾರದಲ್ಲಿ ಸ್ಟಾರ್ ಕ್ಯಾಂಪೇನ್ ಆಗಿ ಗುರುತಿಸಿಕೊಂಡರು .

ನಿನ್ನೆ ಗೇರುಸೊಪ್ಪದಿಂದ ಕೊಳೆಗದ್ದೆವರೆಗೆ ಒಟ್ಟು ಹತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಶ್ರೀಕಲಾ ಶಾಸ್ತ್ರಿ ದಂಪತಿಗಳು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯಕ್ ಪರ ಪ್ರಚಾರ ನಡೆಸಿದರು .

RELATED ARTICLES  ಸಮಾಜದಲ್ಲಿ ನಿರ್ಗತಿಕರು ಅಸಹಾಯಕರಿಗೆ ಉದ್ಯೋಗ ಖಾತ್ರಿ ಯೋಜನೆ ಆಶಾದೀಪವಾಗಿದೆ. ಉಮೇಶ ಮುಂಡಳ್ಳಿ

ಎಲ್ಲೆಡೆಯಲ್ಲಿ ತನ್ನದೇ ಆದಂತಹ ಪ್ರಚಾರ ಭರಾಟೆಯಲ್ಲಿ ತೊಡಗಿಕೊಂಡಿರುವ ಬಿಜೆಪಿ ಕಾರ್ಯಕರ್ತರು ಶತಾಯಗತಾಯ ಪ್ರಯತ್ನ ಮಾಡಿ ಬಿಜೆಪಿಯನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ .

ಈ ಹಿಂದೆ ಕುಮಟಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರ ಪರವಾಗಿ ತಮ್ಮ ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಕಲಾ ಶಾಸ್ತ್ರಿ ಹಾಗೂ ಉದ್ಯಮಿ ಸುಬ್ರಹ್ಮಣ್ಯ ಶಾಸ್ತ್ರಿ ನಿನ್ನೆ ದಿನ ಭಟ್ಕಳದಲ್ಲಿ ಕ್ಯಾಂಪೇನ್ ನಡೆಸಿದರು .

ಮೋದಿಯವರ ಜನಪರ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಆಡಳಿತದ ಕುರಿತಾಗಿ ಜನಮನ ತಲುಪುವಂತೆ ಮಾತನಾಡಿದ ಸುಬ್ರಹ್ಮಣ್ಯ ಶಾಸ್ತ್ರಿ ಜನತೆಗೆ ಮೋದಿ ಸರ್ಕಾರದ ಕುರಿತಾಗಿ ಅರಿವು ಮೂಡಿಸಿದರು.

RELATED ARTICLES  ಪ್ರಾಣಾಯಾಮ ಮಾಡುವುದಲ್ಲ, ಪ್ರಾಣಾಯಾಮ ಆಗಬೇಕು : ಭುವನ ಸುಂದರ

IMG 20180506 WA0008
ಅದೇ ರೀತಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದರೆ, ಕರ್ನಾಟಕದ ಅಭಿವೃದ್ಧಿಯ ದಿಶೆಯನ್ನು ಬದಲಿಸುವ ಭರವಸೆಯ ಮಾತನಾಡಿದ ಶ್ರೀಕಲಾ ಶಾಸ್ತ್ರಿ ಹೊನ್ನಾವರ ಕ್ಷೇತ್ರಕ್ಕೆ ಸುನೀಲ್ ನಾಯಕ ರವರನ್ನು ಬಹುಮತದಿಂದ ಆರಿಸಿ ತರುವಂತೆ ಮತಯಾಚಿಸಿದರು.

ಒಟ್ಟಿನಲ್ಲಿ ತನ್ನದೇ ಆದ ಕಾರ್ಯವೈಖರಿಯಲ್ಲಿ ಮುನ್ನಡೆಯುತ್ತಿರುವ ಯುವ ನಾಯಕ ಸುನಿಲ್ ನಾಯ್ಕ ಬೆಂಬಲಕ್ಕೆ ಸ್ಟಾರ್ ಕ್ಯಾಂಪೇನ್ ಗಳಾಗಿ ಶಾಸ್ತ್ರಿ ದಂಪತಿಗಳು ತೆರಳಿ ಮತ ಬೇಟೆ ಜೋರಾಗಿ ನಡೆಸಿದರು.