ಕುಮಟಾ: ಹೆಗಡೆಯ ಶಿವಪುರ ದಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಪರವಾಗಿ ಹೆಗಡೆ ಉಸ್ತುವಾರಿ ಎಮ್ ಜಿ ಭಟ್ಟ್, ಮುಖಂಡರಾದ ಜಿ ಎಸ್ ಗುನಗ, ಸುಬ್ರಾಯ ವಾಳ್ಕೆ, ಕುಮಟಾ ಪುರಸಭಾ ಸದಸ್ಯರಾದ ಪ್ರಶಾಂತ್ ನಾಯ್ಕ, ವಿಶ್ವನಾಥ ನಾಯ್ಕ, ಗ್ರಾ ಪಂ ಸದಸ್ಯ ಹರೀಶ ನಾಯ್ಕ ಹಾಗೂ ಹೆಗಡೆ ಪಂಚಾಯಿತಿ ಬಿಜೆಪಿ ಸದಸ್ಯರು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಕಮಲದ ಚಿನ್ಹೆಗೆ ಮತ ನೀಡಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಯವರನ್ನು ಹೆಚ್ಚಿನ ಮತ ನೀಡಿ ಗೆಲ್ಲಿಸುವಂತೆ ವಿನಂತಿಸಿ ಪ್ರಚಾರ ಸಭೆ ನಡೆಸಿದರು

RELATED ARTICLES  ಸಿದ್ದಾಪುರದಲ್ಲಿ ಎರಡು ತಲೆ ಹೊಂದಿ‌ ಜನಿಸಿದ್ದ ಕರು ಸಾವು!

ಸಭೆಯಲ್ಲಿ ಮಾತನಾಡಿದ ಸುಬ್ರಾಯ ವಾಳ್ಕೆ ನೀವೆಲ್ಲರೂ ಹಿಂದೆ ಬೇರೆ ಪಕ್ಷಗಳಿಗೆ ಮತ ನೀಡಿರಬಹುದು ಆದರೆ ಈ ಬಾರಿ ನಿಮ್ಮ ಮತ ಹಿಂದುತ್ವದ ಪರವಾಗಿರಲಿ.. ಕಾಂಗ್ರೆಸ್ ತೊಲಗಿಸಿ ಬಿಜೆಪಿ ಅಧಿಕಾರಕ್ಕೆ ತರಬೇಕಿದೆ ಎಂದರಲ್ಲದೇ ಮೋದಿಯವರ ಸಾಧನೆಯನ್ನು ಎಳೆ ಎಳೆಯಾಗಿ ವಿವರಿಸಿ 22 ನೇ ಕಾಂಗ್ರೆಸ್ ಮುಕ್ತ ರಾಜ್ಯ ವನ್ನಾಗಿ ಮಾಡಲು ನೀವೆಲ್ಲರೂ ಸಂಘಟಿತರಾಗಿ ಎಂದು ಕೇಳಿಕೊಂಡರು ನಂತರ ಈ ಬಾರಿ ಬಿಜೆಪಿ ಉತ್ತಮ ಅಭ್ಯರ್ಥಿ ಯನ್ನು ಆಯ್ಕೆ ಮಾಡಿದೆ ನಾವೆಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ದಿನಕರ ಶೆಟ್ಟಿ ಯವರ ಗೆಲುವಿಗೆ ಶ್ರಮಿಸುತ್ತಿದ್ದೇವೆ.

RELATED ARTICLES  ಉರ್ದು ಶಾಲೆಯಲ್ಲಿ ಕನ್ನಡ ಹಾಡುಗಳದೇ ಕಲರವ

ನೀವೂ ಕೂಡ ಈ ಬಾರಿ ಯಾವುದೇ ಆಮಿಷಗಳಿಗೆ ಬಲಿಯಾಗದೇ ನಿಮ್ಮ ಸಂಘಗಳಿಗೆ ಸಾಲ ನೀಡಿ ಉದ್ಧರಿಸುತ್ತೇವೆ, ಅಥವಾ ನಿಮಗೆ ಓಟಿಗೆ ಹಣ ನೀಡುತ್ತೇವೆ ಎಂದವರಿಗೆ ಮರಳಾಗದೇ ಮತ ಯಂತ್ರದಲ್ಲಿ ಒಂದನೇ ನಂಬರಿನಲ್ಲಿರುವ ಕಮಲದ ಚಿನ್ಹೆಯ ಬಟನ್ ಒತ್ತುವುದರ ಮೂಲಕ ಈ ಬಾರಿ ಬಿಜೆಪಿ ಗೆಲ್ಲಿಸಲು ಮನವಿ ಮಾಡುತ್ತೇನೆ ಎಂದರು.. ನೂರಾರು ಸಂಖ್ಯೆಯಲ್ಲಿ ಆ ಭಾಗದ ಜನರು ಸೇರಿದ್ದರು..