ಹೊನ್ನಾವರ: ತಾಲೂಕಿನ ಹೊನ್ನಾವರದಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಪರವಾಗಿ ಅನಂತ್ ಕುಮಾರ ಹೆಗಡೆ ಮತಬೇಟೆ ನಡೆಸಿದರು.
ಇಂದಿನ ಜನತೆ ಬಿಜೆಪಿಗೆ ಹತ್ತಿರವಾಗುತ್ತಿದೆ, ಮೋದಿಯವರ ಜೊತೆ ಹೊಸ ವಿಚಾರಗಳಿದ್ದು ಆ ಕಾರಣಕ್ಕಾಗಿ ಜನತೆ ಮೋದಿಯವರ ಜೊತೆಗಿದೆ. ಜಾತಿರಾಜಕಾರಣ,ರಸ್ತೆ ಹಾಗೂ ಸ್ಮಶಾನಭೂಮಿಯನ್ನು ಮಾಡಿದ್ದೇ ದೊಡ್ಡ ಹೆಗಳಿಕೆ ಅಲ್ಲ, ಸರಕಾರದ ದುಡ್ಡನ್ನ ಜನರಿಗೆ ನೀಡಲು ಅನಂತಕುಮಾರ ಹೆಗಡೆ ಬೇಕಿಲ್ಲ,ಸಮಾಜವನ್ನು ಮೇಲ್ಪಂಕ್ತಿಯತ್ತ ಕೊಂಡೊಯ್ಯಲು ರಾಜಕಾರಣ ಬೇಕು. ಸಮಾಜ ಶೈಕ್ಷಣಿಕ, ಸಾಮಾಜಿಕ,ಸಾಂಸ್ಕೃತಿಕ ವಾಗಿ ಮುನ್ನಡೆಯಬೇಕಾಗಿರಯವ ಕಾರಣದಿಂದ ರಾಜಕಾರಣ ಬೇಕು. ಅಭಿವೃದ್ಧಿ ಕೇವಲ ಆರ್ಥಿಕವಾಗಿ ಅಲ್ಲ ಎಲ್ಲ ಸ್ಥರಗಳಲ್ಲಿ ಆಗಬೇಕು.
ಸಮುದಾಯದ ಅಭಿವೃದ್ಧಿಗೆ ಹೊಸ ಚಿಂತನೆ ಕೊಡುವಾಗ ಜನತೆ ನಮಗೆ ನಮ್ಮ ಜೊತೆಗಿದೆ. ಹಿಂದುತ್ವ ರಾಜಕೀಯದ ಕಾಯನ್ ಅಲ್ಲ ಚುನಾವಣಾ ಪ್ರಚಾರದ ಅಝೆಂಡಾ ಅಲ್ಲ ಹಿಂದುತ್ವ ಸಮ್ಮ ಸಂಸ್ಕೃತಿಯ ಹಾಗೂ ಬದುಕಿನ ಅಂಗ ನಮ್ಮ ಬದುಕು. ಧರ್ಮಕ್ಕಾಗಿಯೇ ರಾಜಕಾರಣ ಮಾಡುವುದು .ಖೋಟಾ ಹಿಂದುವಾದಿಗಳಿಗೆ ಸಮಾಜದಲ್ಲಿ ಬೆಲೆ ಇಲ್ಲ ಹಿಂದುತ್ವ ನಮ್ಮ ಬದುಕಾಗಬೇಕು ಎಂದರು.
ಎಪ್ಪತ್ತು ವರ್ಷಗಳ ಕಾಂಗ್ರೆಸ್ ಒಬ್ಬ ಅಭ್ಯರ್ಥಿ ಗೆ ಸೀಮಿತವಾಗಿಲ್ಲ. ದೇಶ ವಿಭಜನೆಯಿಂದ ಇಲ್ಲಿನ ವರೆಗೂ ರಾಜ ಕಾರಣ ಮಾಡಿದ್ದು ಕಾಂಗ್ರೆಸ್, ಹಿಂದುಳಿದವರೆಂದು ಹಣೆಪಟ್ಟೆ ನೀಡಿ ಬೇಡುವ ಸಂಸ್ಕೃತಿಗಳ ನ್ನು ಕಲಿಸಿದ್ದು ಕಾಂಗ್ರೆಸ್ ಎಂದ ಅವರು ಹೊಸ ತಲೆಮಾರಿನ ವಿಚಾರಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದರು.
ನಿಮ್ಮ ಮನೆ ಬಾಗಿಲಿಗೆ ಬಂದು ನೋಟು ಕೊಟ್ಟು ಓಟು ಖರೀದಿ ನಡೀತಿದೆ . ತಮ್ಮ ಓಟು ಮಾರಾಟ ಮಾಡುವವರು ದೇಶಕ್ಕೆ ಏನೂ ಕೊಡಲ್ಲ ಎಂಬುದನ್ನು ನೆನಪಿಡಿ. ಯಾರು ಎಷ್ಟು ಕೊಡುತ್ತಾರೆ ಎಂಬುದನ್ನು ನೋಡಿ ಮತ ಹಾಕುವವನು ದೇಶದ ಅಭಿವೃದ್ಧಿಗೆ ಏನನ್ನು ಕೊಡುತ್ತಾನೆ ಎಂದರು.
ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಯಾಕಾಗಿ ದಿನಕರ ಶೆಟ್ಟಿಯವರನ್ನು ಗೆಲ್ಲಿಸಬೇಕು? ಬಿಜೆಪಿಯ ಸಾಧನೆಗಳೇನು? ಎಂಬುದನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಿನಕರ ಶೆಟ್ಟಿ ಬಿಜೆಪಿ ಹಾಗೂ ತಮಗೂ ಇರುವ ವಯಕ್ತಿಕ ಬಾಂಧವ್ಯವನ್ನು ಬಿತ್ತರಿಸಿದ ಅವರು. ಹಿಂದು ಕಾರ್ಯಕರ್ತರ ಬಿಡುಗಡೆಗೆ ಶ್ರಮಿಸಿದ ಬಗ್ಗೆ ಹಿಂದಿನ ವಿವರಣೆಗಳನ್ನು ನೀಡಿದರು.
ನಂತರ ನವಿಲಗೋಣ ನಂದಿಕೇಶ್ವರ ದೇವಾಲಯಲ್ಲಿ ಪೂಜೆ ಸಲ್ಲಿಸಿ ನವಿಲಗೋಣ ಅಗ್ರಹಾರದಲ್ಲಿ ಪ್ರಚಾರ ನಡೆಸಿದರು.
ಬಿಜೆಪಿ ಪ್ರಮುಖರಾದ ಪ್ರಮೋದ ಹೆಗಡೆ, ಸುಬ್ರಹ್ಮಣ್ಯ ಶಾಸ್ತ್ರಿ, ವೆಂಕಟೇಶ ನಾಯಕ, ಎನ್ ಎಸ್ ಹೆಗಡೆ,ಚಿದಾನಂದ ಭಂಡಾರಿ,ರಾಜೇಶ ಭಂಡಾರಿ, ಲೋಕೇಶ ಮೇಸ್ತಾ,ಸುಬ್ರಾಯ ನಾಯ್ಕ, ಜಿ.ಜಿ ಭಟ್ಟ,ಗಣೇಶ ಪೈ, ಶ್ರೀಕಾಂತ ನಾಯ್ಕ ,ಗುಬ್ಬಿ ಗಜಾನನ ಹೆಗಡೆ,ಸುರೇಶ ಭಟ್ಟ ಇನ್ನಿತರರು ಹಾಜರಿದ್ದರು.