ಬೆಂಗಳೂರು: ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಈ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ ಶೇ 71.93 ವಿದ್ಯಾರ್ಥಿಗಳು ಈ ಬಾರಿ ಉತ್ತೀರ್ಣರಾಗಿದ್ದಾರೆ. 

ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ಉತ್ತರ ಕನ್ನಡ ದ್ವಿತೀಯ, ಚಿಕ್ಕೋಡಿ ತೃತೀಯ ಹಾಗೂ ಯಾದಗಿರಿ ಜಿಲ್ಲೆ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದಿವೆ. 

ಮೈಸೂರು ದಕ್ಷಿಣ ತಾಲೂಕಿನ ಸುವಿದ್ಯಾ ಹೈಸ್ಕೂಲ್‌ನ ವಿದ್ಯಾರ್ಥಿ ಯಶಸ್‌ ಎಂ.ಎಸ್‌ ಮತ್ತು ಬೆಂಗಳೂರು ದಕ್ಷಿಣ-1 ತಾಲೂಕಿನ ಹೋಲಿ ಚೈಲ್ಡ್‌ ಇಂಗ್ಲಿಷ್‌ ಹೈಸ್ಕೂಲಿನಸುದರ್ಶನ್‌ ಕೆ.ಎಸ್‌ 625/625 ಅಂಕ ಪಡೆದು ರಾಜ್ಯಕ್ಕೆ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. 8 ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. 12 ವಿದ್ಯಾರ್ಥಿಗಳು 623 ಅಂಕಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. 

RELATED ARTICLES  ಕದ್ರಿ ಉದ್ಯಾನವನ ಪ್ರವಾಸಿಗರಿಗೆ ಸುಂದರ, ಸುರಕ್ಷಿತ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿ.

ಎಂದಿನಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಪಡೆದಿದ್ದು, ಶೇ 78.01ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದ ಶೇ 74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ಶೇ 69.38 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 

ಒಟ್ಟು 1,342 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಅವುಗಳ ಪೈಕಿ 102 ಸರಕಾರಿ ಶಾಲೆಗಳಾಗಿವೆ. ಒಟ್ಟಾರೆ ಫಲಿತಾಂಶ ಕಳೆದ ಬಾರಿಗಿಂತ ಶೇ 4ರಷ್ಟು ಹೆಚ್ಚಾಗಿದೆ. 

ರಾಜ್ಯಕ್ಕೆ 2 ಜನ ಟಾಪರ್ಸ್‌ – ತಲಾ 625 ಅಂಕ 71.93 ಒಟ್ಟು ಉತ್ತೀರ್ಣ ಶೇ. 4 ರಷ್ಟು ಹೆಚ್ಚಿ 8,38,088 – ಒಟ್ಟು ಮಕ್ಕಳು 625ರಲ್ಲಿ 8 ಮಂದಿಗೆ 624 ಅಂಕ ಶೇ. 78.01ರಷ್ಟು ಬಾಲಕಿಯರು ಉತ್ತೀರ್ಣ ಶೇ. 66.56 ರಷ್ಟು ಬಾಲಕರು ಉತ್ತೀರ್ಣ 12 ವಿದ್ಯಾರ್ಥಿಗಳಿಗೆ 625 ರಲ್ಲಿ 623 ಅಂಕ ಶಿಕ್ಷಣ ಇಲಾಖೆ ಕಾರ್ಯದರ್ಶಿ ರಜನೀಶ್‌ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. 

RELATED ARTICLES  ದೋಣಿ ಮುಳುಗಡೆ : ಓರ್ವ ಮೀನುಗಾರ ನಾಪತ್ತೆ

ಈ ಬಾರಿ ಒಟ್ಟು 4,56,103 ಬಾಲಕರು ಮತ್ತು 3,98,321 ಬಾಲಕಿಯರೂ ಸೇರಿದಂತೆ ಒಟ್ಟು 8,54,424 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 70,253 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 23,199 ಮಂದಿ ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ.