Untitled 1 copy

ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಶೇ.95.40 ಆಗಿದ್ದು, ಪರೀಕ್ಷೆಗೆ ಕುಳಿತಿದ್ದ 87 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು 500 ಕ್ಕಿಂತ ಅಂಕಗಳಿಸಿದ್ದಾರೆ. ಕುಮಾರಿ ಐಶ್ವರ್ಯಾ ಗುರುನಾಥ ಶಾನಭಾಗ 602 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಕುಮಾರಿಯರಾದ ಪೂರ್ಣಿಮಾ ಕಮಲಾಕರ ಪಟಗಾರ (591), ಕಾಂಚಿಕಾ ಗಣೇಶ ಮಡಿವಾಳ (577), ಅಪೂರ್ವ ಅನಿಲ್ ಚಿತ್ರಿಗಿ (570), ನಾದಶ್ರೀ ಮಾದೇವ ಮಡಿವಾಳ (558) ಅಂಕಗಳನ್ನು ಗಳಿಸಿ ಮೊದಲ ಐದು ಸ್ಥಾನಗಳನ್ನು ಪಡೆದಿದ್ದಾರೆ. ಪ್ರಥಮ ಭಾಷೆ ಕನ್ನಡದಲ್ಲಿ ಹರೀಶ ಗೋಪಾಲಕೃಷ್ಣ ಅಂಬಿಗ ಮತ್ತು ಸಮಾಜ ವಿಜ್ಞಾನದಲ್ಲಿ ಕುಮಾರಿ ಐಶ್ವರ್ಯಾ ಶಾನಭಾಗ ಪೂರ್ಣ ಅಂಕಗಳನ್ನು ಗಳಿಸಿರುತ್ತಾರೆ.

RELATED ARTICLES  ಡಾ. ಜಿ.ಎಲ್ ಹೆಗಡೆ ನಮ್ಮವರೆಂಬ ಹೆಮ್ಮೆ ನಮಗಿದೆ : ಶಿವಾನಂದ ಹೆಗಡೆ ಕೆರೆಮನೆ.