ಹೊನ್ನಾವರ : ಸಾಗರ ರೆಸಿಡೆನ್ಸಿ ಖಾಸಗಿ ಹೋಟೆಲ್ಲನಲ್ಲಿ ಶಾಸಕಿ ಶಾರದಾ ಮೋಹನ ಶೆಟ್ಟಿ ಹಾಗೂ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಶಿವಾನಂದ ಹೆಗಡೆ ಕಡತೋಕಾ ಜಂಟಿ ಸುದ್ದಿ ಘೋಷ್ಟಿನಡೆಸುವ ಮಖಾಂತರ ಬಣ ರಾಜಕಾರಣಕ್ಕೆ ತೆರೆ ಎಳೆದಿದ್ದಾರೆ. ದೇಶಪಾಂಡೆಯವರು ರವಿಕುಮಾರ ಶೆಟ್ಟಿ ಹಾಗೂ ಶಿವಾನಂದ ಹೆಗಡೆಯವರ ಮನ ಒಲಿಸುವ ಮೂಲಕ ಕಾಂಗ್ರೆಸ್ ತೆಕ್ಕೆಗೆ ಬಲ ತಂದಿದ್ದರು.
ಹೊನ್ನಾವರದಲ್ಲಿ ಕರೆದ ಜಂಟಿ ಸುದ್ದಿ ಮಾತನಾಡಿದ ಶಿವಾನಂದ ಹೆಗಡೆ ಕಡತೋಕಾ ಅವರು ಮಾತನಾಡಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೇತ್ರತ್ವದಲ್ಲಿ ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿವೆ ನಮ್ಮ ಜಿಲ್ಲೆಯ ಅಭಿವೃದ್ದಿಗಾಗಿ ಸಚಿವ ಆರ್ ವಿ ದೇಶಪಾಂಡೆಯವರು ಸಾಕಷ್ಟು ಶ್ರಮಿಸಿದ್ದಾರೆ. ಮುಖ್ಯವಾಗಿ ಶಾಸಕಿಯಾಗಿ ಮತ್ತು ಕರಾವಳಿ ಅಭಿವೃದ್ದಿ ಪ್ರಾದಿಕಾರದ ಅಧ್ಯಕ್ಷರಾಗಿ ಶಾರದಾ ಶೆಟ್ಟಿಯವರು ಸಾಕಷ್ಟು ಅನುದಾನಗಳನ್ನ ತಂದಿದ್ದಾರೆ ನಾವೆಲ್ಲರೂ ಒಂದಾಗಿ ಈ ಬಾರಿ ನಮ್ಮ ಕ್ಷೇತ್ರದಲ್ಲಿ ಶಾರದಾ ಶೆಟ್ಟಿಯವರ ಗೆಲುವಿಗೆ ಸಹಕಾರ ನೀಡುತ್ತೇವೆ ಎಂದರು. ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ಬಗ್ಗೆ ಕಿಡಿಗೇಡಿಗಳು ಇಲ್ಲದ ಉಹಾಪೋಹವನ್ನ ಹಬ್ಬಿಸಿದ್ದು ಅದು ಸತ್ಯಕ್ಕೆ ದೂರವಾದದ್ದು ನಾನು ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ ಕಾಂಗ್ರೆಸ್ ನಿಂದಲೇ ಜಿಲ್ಲಾ ಪಂಚಾಯತ ಸದಸ್ಯನಾಗಿ ಆಯ್ಕೆ ಆಗಿದ್ದೇನೆ ಅಲ್ಲದೆ ಉತ್ತರಕನ್ನಡ ಜಿಲ್ಲಾ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮೀತಿ ಸದಸ್ಯನಾಗಿ ನನಗೆ ಅವಕಾಶ ನೀಡಿದೆ ಎಂದರು. ನನ್ನ ಹಾಗೂ ಶಾಸಕರ ಮದ್ಯೆ ಕಲವು ಅಭಿಪ್ರಾಯ ಭೇದ ಇಲ್ಲಿಯವರೆಗೆ ಇದ್ದಿದ್ದು ನಿಜ ಆದರೆ ಕಳೆದ ಕಹಿ ನೆನಪುಗಳನ್ನೆಲ್ಲಾ ಮರೆತು ಈಗ ಒಂದಾಗಿದ್ದೇವೆ ಅವರ ಗೆಲುವಿಗೆ ಸಂಪೂರ್ಣ ಸಹಕಾರವನ್ನ ನೀಡುತ್ತೇನೆ ಅಲ್ಲದೆ ಮುಂದಿನ ದಿನಗಳಲ್ಲಿ ಆರ್ ದೇಶಪಾಂಡೆಯವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ ಎಂದರು.
ಕುಮಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ ಒಬ್ಬ ಮಹಿಳಾ ಶಾಸಕಿಯಾಗಿ ಹೊನ್ನಾವರ ಕುಮಟಾ ಕ್ಷೇತ್ರಕ್ಕೆ ಸಾವಿರ ಕೋಟಿಗೂ ಮಿಕ್ಕಿ ಅನುದಾನವನ್ನ ತಂದಿದ್ದೇನೆ. ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಯೂ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿವೆ ಕ್ಷೇತ್ರದ ಜನತೆ ನನಗೆ ಆಶಿರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು. ಅಲ್ಲದೆ ಕುಮಟಾ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ ಶಿವಾನಂದ ಹೆಗಡೆಯವರು ಹಾಗೂ ಉಳಿದೆಲ್ಲ ಮುಖಂಡರ ಸಹಕಾರದೊಂದಿಗೆ ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ವಿತ ಎಂದರು.
ಈ ಸಂದರ್ಭದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.