ಕುಮಟಾ : ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘ ಹಿರೇಗುತ್ತಿ ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯು ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 93 ಫಲಿತಾಂಶವನ್ನು ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿರುತ್ತದೆ. ಪರಿಕ್ಷೇಗೆ ಕುಳಿತ 97 ವಿದ್ಯಾರ್ಥಿಗಳಲ್ಲಿ 90 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಪ್ರಥಮ ಸ್ಥಾನವನ್ನು ಕುಮಾರಿ ಅರ್ಪಿತಾ ಎಮ್. ಹರಿಕಂತ್ರ 93% , ದ್ವಿತೀಯ ಸ್ಥಾನವನ್ನು ಕುಮಾರ ಕಾರ್ತಿಕ ಗಣಪತಿ ನಾಯ್ಕ (88.48%) ತೃತೀಯ ಸ್ಥಾನವನ್ನು ಕುಮಾರ ನವೀನ ಜಿ. ಗೌಡ (88.32%) ಮತ್ತು ಸೃಷ್ಠಿ ಸದಾನಂದ ನಾಯಕ (88.32%) ಪಡೆದಿರುತ್ತಾರೆ, ಈ ಮೂಲಕ ಶಾಲೆಗೆ ಆಡಳಿತ ಮಂಡಳಿಯವರಿಗೆ ಪಾಲಕರಿಗೆ ಹಾಗೂ ಊರಿಗೆ ಕೀರ್ತಿ ತಂದಿರುತ್ತಾರೆ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್. ನಾಯಕ ಹಾಗೂ ಸದಸ್ಯರು ಹೈಸ್ಕೂಲ್ ಮುಖ್ಯೋಧ್ಯಾಪಕ ಶ್ರೀ ರೋಹಿದಾಸ ಎಸ್. ಗಾಂವಕರ, ಹಾಗೂ ಶಿಕ್ಷಕ ವೃಂದದವರು ಗ್ರಾಮ ಪಂಚಾಯತ ಅಧ್ಯಕ್ಷ ಸಣ್ಣಪ್ಪ ಮಾರುತಿ ನಾಯಕ ಹಾಗೂ ಸದಸ್ಯರು ಬೃಹ್ಮ ಜಟಕ ಯುವಕ ಸಂಘದ ಅಧ್ಯಕ್ಷರಾದ ಚಂದ್ರಹಾಸ ಎಚ್. ನಾಯಕ ಹಾಗೂ ಪದಾಧಿಕಾರಿಗಳು ಹಾಗೂ ಊರನಾಗರೀಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ವರದಿ: ಎನ್. ರಾಮು ಹಿರೇಗುತ್ತಿ
ಸ್ಪಂದನ ಪೌಂಡೇಶನ್ ಹಿರೇಗುತ್ತಿ
ಮೊ:9900449292