ಇದೊಂದು ಕರುಣಾಜನಕ ಕಥೆ ಎನಿಸಬಹುದು. ಆದರೆ ಇದು ಕಥೆಯಲ್ಲ ಕುಮಟಾದ ಗೋವಿನ ನೈಜ ವ್ಯಥೆ.
ಹೌದು ,
ಕುಮಟಾದಲ್ಲಿ ಬಿಡಾಡಿ ಗೋವುಗಳ ಹಾಗೂ ಕರುವಿನ ಹಸೀ ಜೀವ ಹಿಡಿದು ಮುಕ್ಕುವ ನಾಯಿಗಳ ಹಾವಳಿ ಅತಿಯಾಗಿದೆ.
ಅದೇ ರೀತಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕುಮಟಾದ ಸಿದ್ದನಬಾವಿಯಲ್ಲೊಂದು ಗೋವು ರಸ್ತೆಯ ಬಳಿ ತನ್ನ ಕರುವಿಗೆ ಜನ್ಮ ನೀಡಿದೆ !
ಈಗ ತಾನೇ ಜಗತ್ತು ಕಂಡ ಕರುವನ್ನು ನೋಡಿದ ನಾಯಿಗಳು ಕರುವುನ ಮೇಲೆ ಆಕ್ರಮಣಕ್ಕೆ ಮುಂದಾಗಿದೆ. ತಾಯಿ ತನ್ನ ಕರುವನ್ನು ರಕ್ಷಿಸುವ ನಿಟ್ಟಿನಲ್ಲಿ ನಾಯಿಗಳನ್ನು ಇರಿದು, ಆ ಇರಿತವೂ ಸಾಲದಾದಾಗ ನಾಯಿಗಳನ್ನೇ ಕಚ್ಚುವ ಹಂತದ ಪ್ರಯತ್ನಕ್ಕೆ ಮುಂದಾಗಿದೆ.
ಈ ಎಲ್ಲವನ್ನೂ ಗಮನಿಸಿದ ಸಿದ್ಧನಬಾವಿಯ ಆಶಾ ಸಿಸ್ಟರ್ ಆ ಗೋವನ್ನು ಹಾಗೂ ನವಜಾತ ಗಂಡು ಕರುವನ್ನು ನಾಯಿಯಿಂದ ತಪ್ಪಿಸಿ ತನ್ನ ಮನೆಗೆ ತಂದು ಹುಲ್ಲು ,ಹಿಂಡಿ , ನೀರು ನೀಡುತ್ತ ಆರೈಕೆ ಮಾಡುತ್ತಿದ್ದಾರೆ.
ಸದಾ ಮನೆ ಮನೆಗೆ ತೆರಳಿ ವೃದ್ಧರ,ರೋಗಿಗಳ ಆರೈಕೆ ಮಾಡುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಆಶಾ ಸಿಸ್ಟರ್ ಮನೆಯಲ್ಲಿರುವ ಸಮಯವೇ ಕಡಿಮೆ. ಹಗಲಿಡೀ ಹೊರಗಡೆಯೇ ಇರುವ ಕಾರಣ ಈ ಗೋವು ಹಾಗೂ ಕರುವಿಗೆ ಸಕಾಲಕ್ಕೆ ಮೇವು ನೀರು ನೀಡುತ್ತ ಸಾಕುವುದು ಕಷ್ಟಸಾಧ್ಯವಾಗಿದೆ.
ಈ ಗೋವಿನ ಒಡೆಯರು ಬರುವರೆಂದು ಇಷ್ಟು ದಿನ ಕಾದ ಆಶಾ ಸಿಸ್ಟರ್ , ಆಕಳಿನ ಯಜಮಾನರ ಸುಳಿವು ಸಿಗದಾಗಿ ಕುಮಟಾದ ಜಯದೇವ ಬಳಗಂಡಿಯವರ ಮುಖಾಂತರ “ಸತ್ವಾಧಾರ ನ್ಯೂಸ್” ಗೆ ವಿಷಯ ತಿಳಿಸಿದ್ದು ಗೋವನ್ನು ಕಳೆದುಕೊಂಡ ಗೋವಿನ ಯಜಮಾನರು ಆಶಾ ಸಿಸ್ಟರ್ ಅವರನ್ನು ಸಂಪರ್ಕಿಸಿ ಅವರಿಂದ ಗೋವನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.ತಾವು ಸಾಕಿದ ಗೋವುಗಳನ್ನು ಬಿಡಾಡಿ ಗೋವನ್ನಾಗಿಸದೇ ಮನೆಯಲ್ಲೇ ಕಟ್ಟಿ ಸಾಕುವಂತೆಯೂ ಜನತೆಯಲ್ಲಿ ಕಳಕಳಿಯಿಂದ ವಿನಂತಿಸಿದ್ದಾರೆ.
ಗೋವಿನ ನೋವಿನ ಸಮಯದಲ್ಲಿ ಸ್ಪಂದಿಸಿದ ಆಶಾ ಸಿಸ್ಟರ್ ಅವರನ್ನು ಅವರ ಈ ಗುಣಗಳಿಗಾಗಿ “ಸತ್ವಾಧಾರ ಬಳಗ” ಅಭಿವಂದನೆ ಸಲ್ಲಿಸಿದೆ.
ಅದಲ್ಲದೇ ಈ ಆಕಳಿನ ಯಜಮಾನರು ಆಕಳು ಮತ್ತು ಕರು ವನ್ನು ಪಡೆಯಲು ವಿನಂತಿಸಿದೆ.
ಸಂಪರ್ಕಿಸಿ :
ಆಶಾ ಸಿಸ್ಟರ್ 9241240784