ಕುಮಟಾ: ಇಲ್ಲಿಯ ರೋಟರಿ ಕ್ಲಬ್ ವತಿಯಿಂದ ಹಿರಿಯ ಪ್ರಾಥಮಿಕ ಶಾಲೆ ಕೋಡ್ಕಣಿಯಲ್ಲಿ ಭಾರತೀಯ ದಂತ ವೈದ್ಯ ಸಂಘದ ಸಹಯೋಗದಲ್ಲಿ 150 ಮಕ್ಕಳಿಗೆ ಉಚಿತ ದಂತ ಚಿಕಿತ್ಸೆ ಹಾಗೂ ಟೂತ್ ಪೇಸ್ಟ್, ಬ್ರಷ್‍ಗಳನ್ನು ವಿತರಿಸಲಾಯಿತು.   ದಂತ ವೈದ್ಯ ಡಾ. ದೀಪಕ ಡಿ. ನಾಯಕ ಮಕ್ಕಳ ಹಲ್ಲಿನ ಆರೋಗ್ಯದ ಕುರಿತು  ವಿಶೇಷವಾಗಿ ಮಾದರಿಗಳ ಸಹಾಯದಿಂದ  ಮಾಹಿತಿ ಮನದಟ್ಟಾಗಿಸಿದರು.   ಆ ಕುರಿತು ಕರಪತ್ರ ನೀಡಿದರು.   ಅಲ್ಲದೇ ದಂತ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸಾ ಕ್ರಮ ಪಾಲಿಸಲು ಸಲಹೆ ನೀಡಿದರು. ರೋಟರಿ ಕಾರ್ಯದರ್ಶಿ ಎನ್.ಆರ್.ಗಜು ತಪಾಸಣೆಯ ಉದ್ದೇಶ ಹಾಗೂ ದಂತರಕ್ಷಣೆಯ ಸುಲಭ ಮಾರ್ಗೋಪಾಯಗಳನ್ನು ವಿವರಿಸಿದರು.   ರೋಟರಿ ಅಧ್ಯಕ್ಷ ಜಿ.ಜೆ.ನಾಯ್ಕ ಅಧ್ಯಕ್ಷತೆಯನ್ನು ವಹಿಸಿದ್ದರು.  ಶಾಲಾ ಮುಖ್ಯಾಧ್ಯಾಪಕ, ಶಿಕ್ಷಕವೃಂದದವರು ನೆರವಾದರು.