ಕುಮಟಾ : ರಾಜ್ಯ ಬಿಜೆಪಿ ಘಟಕ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದರೆ, ಕುಮಟಾ ಹೊನ್ನಾವರ ಕ್ಷೇತ್ರದ ಚುನಾವಣಾ ಪ್ರಣಾಳಿಕೆಯನ್ನು ಇಂದು ಕುಮಟಾದ ಬಿಜೆಪಿ ಕಾರ್ಯಲಯದಲ್ಲಿ ದಿನಕರ ಶೆಟ್ಟಿ ಬಿಡಗಡೆಗೊಳಿಸಿದರು.
ಇಲ್ಲಿನ ಹೆಗಡೆ ಕ್ರಾಸ್ ಸಮೀಪ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಕ್ಷದ ಪದಾಧಿಕಾರಿಗಳ ಸಮ್ಮುಖದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ದಿನಕರ ಶೆಟ್ಟಿ ಬಿಡುಗಡೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ” ಜನಪರ ಸಂಘಟನೆ ಮಾಡಿ, ಸಾರ್ವಜನಿಕರ ಸಭೆ ನಡೆಸಿ ಅವರ ಅಭಿಪ್ರಾಯವನ್ನು ಪಡೆದು , ಮೊದಲನೇ ಬಾರಿಗೆ ಇಷ್ಟು ವ್ಯವಸ್ಥಿತವಾಗಿ ಜನಾಭಿಪ್ರಾಯ ಸಂಗ್ರಹಿಸಿ ಅಭಿವೃದ್ಧಿ ಮುನ್ನೋಟದ ಪ್ರಣಾಳಿಕೆಯನ್ನು ತಯಾರಿಸಲಾಗಿದೆ. ನಮ್ಮ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಏರುವುದು ಶೆ.೧೦೦ ರಷ್ಟು ಖಚಿತವಾಗಿದೆ. ಆದ್ದರಿಂದ ಇದು ಕೇವಲ ಭರವಸೆ ಮಾತ್ರವಲ್ಲ, ಇದೊಂದು ಅನುಷ್ಠಾನ ಪತ್ರವಾಗಿದೆ.
ಪ್ರಣಾಳಿಕೆಯಲ್ಲಿ ಜನರ ಬೇಡಿಕೆಗಳು ಬಿಟ್ಟಿದ್ದಲ್ಲಿ ಅದನ್ನು ತಿಳಿಸಿದಲ್ಲಿ ಜೋಡಿಸಿಕೊಳ್ಳಲಾಗುತ್ತದೆ. ಜನರು ಬಿಜೆಪಿಗೆ ಮತ ನೀಡಬೇಕು ಎಂದು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡಿದ್ದು, ಈ ಬಾರಿ ಗೆಲುವು ಶತಸಿದ್ಧ ” ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತದಿಂದ ಬರುವುದು ಸತ್ಯ. ಆದ್ದರಿಂದ ಜನರು ಈ ಬಾರಿ ಬಿಜೆಪಿಯೊಂದಿಗೆ ಇದ್ದಾರೆ. ಅಭಿವೃದ್ಧಿ ನೋಡದ ಮನಸ್ಥಿತಿಯವರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಕೇವಲ ಸ್ವಾರ್ಥ ರಾಜಕಾರಣ ತಿಳಿದಿದೆ. ಇದೊಂದು ದೂರದೃಷ್ಟಿತ್ವದ ಅಭಿವೃದ್ಧಿ ಆಗಿದೆ. ಕ್ಷೇತ್ರದ ಅಭಿವೃದ್ಧಿ ಬಿಜೆಪಿ ಬಿಟ್ಟರೆ ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಹೇಮಂತ ಗಾವ್ಕರ್, ಅಶೋಕ ಪ್ರಭು ,ವಿನೋದ ಭಂಡಾರಿ ಇನ್ನಿತರರು ಹಾಜರಿದ್ದರು.