ಕುಮಟಾ:ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸುತ್ತಿದೆ ,ಹಿರಿ ಕಿರಿಯ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇಂದೂ ಸಹ ಪ್ರಚಾರ ಭರಾಟೆ ಜೋರಾಗಿತ್ತು.

IMG 20180509 WA0007
ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು ಮಾಜಿ ಜಿ ಪಂ ಸದಸ್ಯರು, ಮಾಜಿ ಬ್ಲಾಕ ಅಧ್ಯಕ್ಷರು ಆದ ಶ್ರೀಯುತ ಹೊನ್ನಪ್ಪ ನಾಯಕರವರು ಅಳಕೋಡ ಪಂಚಾಯತ ವ್ಯಾಪ್ತಿಯಲ್ಲಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ಪರವಾಗಿ ಪ್ರಚಾರ ಮಾಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಧುಸೂದನ ಶೆಟ್,ನಾಗೇಶ ನಾಯ್ಕ, ದೇವು ಗೌಡ, ಎಮ್ ಟಿ ನಾಯ್ಕ ಹಾಗೂ ಕೃಷ್ಣಾನಂದ ವರ್ಣೇಕರ್ ಉಪಸ್ಥಿತರಿದ್ದರು.

RELATED ARTICLES  ಕುಮಟಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಯಕ್ರಮ.

ಅದೇ ರೀತಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಬಂಕಿಕೊಡ್ಲದಲ್ಲಿ ಅಪಾರ ಜನ ಬೆಂಬಲದೊಂದಿಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಜಯಂತ ನಾಯ್ಕ, ನಾಗರಾಜ ನಾಯ್ಕ, ಹಾಗೂ ಪಂಚಾಯತ ಸದಸ್ಯರು ಭಾಗವಹಿಸಿದರು.

RELATED ARTICLES  ನಾಪತ್ತೆಯಾದವನು ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆ

IMG 20180509 WA0006

ಗೋಕರ್ಣ ಪಂಚಾಯತ್ ವ್ಯಾಪ್ತಿಯ ರುದ್ರಪಾದ ಹಾಗೂ ಮಾರುತಿಕಟ್ಟೆಯಲ್ಲಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಚುನಾವಣಾ ಪ್ರಚಾರ ಮಾಡಿ ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಗುಲಾಬಿ ಮೂಡಂಗಿ, ಮೋಹನ್ ನಾಯ್ಕ, ವಿಜಯ ಹೊಸ್ಕಟ್ಟಾ, ಮಹಾಬಲೇಶ್ವರ ಗೌಡ, ವಿನೋದ ರೇಡ್ಕರ, ಸುವರ್ಣ ಅಪ್ಟೇಕರ್ ಮುಂತಾದವರು ಭಾಗವಹಿಸಿದ್ದರು.