ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶೀರ್ವಾದದಿಂದ ಹವ್ಯಕ ಮಹಾಮಂಡಲದ ನೇತೃತ್ವದಲ್ಲಿ ಪ್ರತಿವರ್ಷ ಆಯೋಜಿಸಲಾಗುವ ವಿರಾಮ~ವಿಚಾರ~ವಿಹಾರ ಶಿಬಿರದ ಸಮಾರೋಪ ಸಮಾರಂಭವು ಶ್ರೀ ಭಾರತೀ ಗುರುಕುಲದಲ್ಲಿ ನಡೆಯಿತು.
ಮೊದಲಿಗೆ ಶಿಬಿರಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಪ್ರಧಾನಾಧ್ಯಾಪಕರಾದ ಸತ್ಯನಾರಾಯಣ ಭಟ್ ಪಂಜಿತ್ತಡ್ಕ ಸ್ವಾಗತಿಸಿದರು. ಹವ್ಯಕ ಮಾಹಾಮಂಡಲದ ಕಾರ್ಯದರ್ಶಿ ಶ್ರೀ ಹರಿಪ್ರಸಾದ ಪೆರಿಯಾಪು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಾಮಂಡಲದ ಅಧ್ಯಕ್ಷರಾದ ಈಶ್ವರಿ ಶ್ಯಾಮ ಭಟ್ ಬೇರ್ಕಡವು ಅಧ್ಯಕ್ಷತೆ ವಹಿಸಿದ್ದರು. ಮಹಾಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನ ಶ್ರೀ ಯಸ್.ಜಿ. ಭಟ್ ಕಬ್ಬಿನಗದ್ದೆ, ಮಹಾಮಂಡಲದ ಮುಷ್ಟಿ ಭಿಕ್ಷಾ ಪ್ರಧಾನ ಮಲ್ಲಿಕಾ ಭಟ್ ಕಲ್ಲಡ್ಕ, ರಾಮಚಂದ್ರಾಪುರ ಮಂಡಲ ಅಧ್ಯಕ್ಷ ರಮೇಶ ಗುಂಡೂಮನೆ, ಗುರುಕುಲದ ಆಚಾರ ವಿಚಾರ ಶಾಸ್ತ್ರಿಗಳಾದ ಶ್ರೀ ಗಜಾನನ ಭಟ್,ಶ್ರೀ ಭಾರತೀ ಗುರುಕುಲದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಐಸಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ತಮ್ಮ ಶಿಬಿರದ ಅನುಭವವನ್ನು ಆಗಮಿಸಿದ ಪೋಷಕರೊಂದಿಗೆ ಹಂಚಿಕೊಂಡರು. ಶಿಬಿರಾರ್ಥಿಯಾಗಿ ಆಗಮಿಸಿದ ಸಾರ್ಥಕ್ ಭಟ್ ಹಾಗೂ ಭಾರವಿ ಶಿಬಿರದ ಕುರಿತು ಸ್ವರಚಿತ ಕವನವನ್ನು ಹಾಡಿದರು. ನಂತರ ಪೋಷಕರು ಶಿಬಿರದ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಶಿಕ್ಷಕಿಯರ ಪರವಾಗಿ ಕು.ಸಿಂಚನಾ ಕಾನತ್ತೂರು ಶಿಬಿರದ ಕುರಿತು ಅಭಿಪ್ರಾಯವನ್ನು ತಿಳಿಸಿದರು.
ಶಿಬಿರದ ಸಂಯೋಜಕರಲ್ಲಿ ಒಬ್ಬರಾದ ಬೆಂಗಳೂರು ಉತ್ತರ ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನ ಶ್ರೀಮತಿ ಸಂಧ್ಯಾ ಕಾನತ್ತೂರು ಮಾತನಾಡಿ ಶಿಬಿರದ ಯಶಸ್ಸಿಗಾಗಿ ಶ್ರಮಿಸಿದವರನ್ನು ನೆನಪಿಸಿಕೊಂಡರು.
ಬೆಂಗಳೂರು ದಕ್ಷಿಣ ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನರಾದ ಅಶ್ವಿನಿ ಅರವಿಂದ ಧನ್ಯವಾದವಿತ್ತರು. ಮುಳ್ಳೇರಿಯಾ ಮಂಡಲದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಪ್ರಧಾನಾಧ್ಯಾಪಕರಾದ ಶ್ರೀ ಸತ್ಯನಾರಾಯಣ ಪಂಜಿತ್ತಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.
ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನೀ ಪ್ರಧಾನರಾದ ಕೇಶವಪ್ರಸಾದ ಎಡೆಕ್ಕಾನ, ಬೆಂಗಳೂರು ದಕ್ಷಿಣ ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನ ಅಶ್ವಿನಿ ಅರವಿಂದ,ಬೆಂಗಳೂರು ಉತ್ತರ ಮಂಡಲ ವಿದ್ಯಾರ್ಥಿವಾಹಿನೀ ಪ್ರಧಾನ ಸಂಧ್ಯಾ ಕಾನತ್ತೂರು, ರಾಮಚಂದ್ರಾಪುರ ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನ ಗಣೇಶ ಹೆಚ್. ಕೆ, ಮುಳ್ಳೇರಿಯಾ ಮಂಡಲ~ನೀರ್ಚಾಲು ವಲಯದ ಶಿಷ್ಯಮಾಧ್ಯಮ ವಿಭಾಗದ ಮಹೇಶ ಕೃಷ್ಣ ತೇಜಸ್ವಿ ಕುಳಮರ್ವ, ಸಾಗರ ಮಂಡಲದ ಭಾನುಮತಿ,ಸಿದ್ಧಾಪುರ ಮಂಡಲದ ವಿಜಯಲಕ್ಷ್ಮಿ ಅಂಗಡಿ, ಹೊನ್ನಾವರ ಮಂಡಲದ ಜಗದೀಶ,ಮುಳ್ಳೇರಿಯಾ ಮಂಡಲದ ದಿವ್ಯಶ್ರೀ ಪೆರ್ಮುಖ, ಶ್ರೀ ಭಾರತೀ ಗುರುಕುಲದ ಹಿರಿಯ ವಿದ್ಯಾರ್ಥಿಗಳಾದ ಭರತ, ಶ್ರೀಹರ್ಷ, ಚಿರಂತ, ರಾಜೇಶ,ಆನಂದ,ಕು. ರಕ್ಷಿತಾ,ಕು.ವೆಂಕಿತಾ,ಕು. ಭೈರವೀ, ಮೈತ್ರೇಯೀ ಗುರುಕುಲದ ವಿದ್ಯಾರ್ಥಿನಿಯರಾದ ಸಿಂಚನಾ ಕಾನತ್ತೂರು, ಪಾರ್ವತಿ ಎಡಪ್ಪಾಡಿ, ಶಿಬಿರದಲ್ಲಿ ಪೂರ್ಣಾವಧಿ ತೊಡಗಿಸಿಕೊಂಡಿದ್ದರು.
ಗೋಕರ್ಣ ಮಂಡಲದ ವಿವಿಧ ವಲಯಗಳಿಂದ 54 ವಿದ್ಯಾರ್ಥಿ ಗಳು ಭಾಗವಹಿಸಿದ್ದು, ಶಿಬಿರಾರ್ಥಿಗಳಿಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕರ ಕಮಲಗಳಿಂದ ಪ್ರಮಾಣಪತ್ರ ಹಾಗೂ ಮಂತ್ರಾಕ್ಷತೆಗಳನ್ನು ಅನುಗ್ರಹಿಸಲಾಯಿತು.
ವರದಿ:ಮಹೇಶ ಕೃಷ್ಣ ತೇಜಸ್ವಿ ಮುಳ್ಳೇರಿಯ ಮಂಡಲ ನೀರ್ಚಾಲು ವಲಯ ಶಿಷ್ಯಮಾಧ್ಯಮಪ್ರಧಾನ