ಏನಾದರೂ ಹೇಳಬೇಕೆಂದಿದ್ದರೆ ನೀನು ಇದ್ದಲ್ಲೇ ಹೇಳಿದರೂ ಅದು ನನಗೆ ತಲುಪುತ್ತದೆ….. ಈ ಬಹಿರಂಗ ಉಪಾಸನೆಗಿಂತ ಧ್ಯಾನ – ಸಮಾಧಿಯ ಅಂತರಂಗ ಸೇವೆ ಹೆಚ್ಚಿನ ಮಹತ್ವದ್ದು.
(ಇಸವಿ ಸನ ೧೯೬೧ರಲ್ಲಿ ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
|| ಶ್ರೀರಾಮ ಸಮರ್ಥ ||
ಅಷ್ಟಮಿ, ಜ್ಯೇಷ್ಠ, ಕೃ, ಶ ೧೮೮೩
೦೭-೦೬-೧೯೬೧
ಚಿ.ಪಂಡಿತನಿಗೆ ಆಶೀರ್ವಾದ,
ಮಗಾ! ಪಾದುಕೆಯ ದರ್ಶನ ತೆಗೆದುಕೊಂಡು ಹೋದೆಯೆಂದರೆ ಸಾಕು. ರಾತ್ರಿ ಇಲ್ಲಿ ನಿನ್ನ ಬಹಳ ವೇಳೆ ಹೋಗುತ್ತಿದೆ. ಏನಾದರೂ ಹೇಳಬೇಕೆಂದಿದ್ದರೆ ನೀನು ಇದ್ದಲ್ಲೇ ಹೇಳಿದರೂ ಅದು ನನಗೆ ತಲುಪುತ್ತದೆ. ಹೆಚ್ಚಿನ ವೇಳೆ ಅಭ್ಯಾಸದಲ್ಲಿ ಹಾಕು. ಈ ಬಹಿರಂಗ ಉಪಾಸನೆಗಿಂತ ಧ್ಯಾನ – ಸಮಾಧಿಯ ಅಂತರಂಗ ಸೇವೆ ಹೆಚ್ಚಿನ ಮಹತ್ವದ್ದು. ಬೆಳಿಗ್ಗೆ ಹಸಿವೆಯಾದರೆ ಹಾಲು-ಅವಲಕ್ಕಿ ತಿಂದು, ತಿಂದ ಮೇಲೆ ಆಚಮನ ಮಾಡಿದೆ ಅಂದರೆ ಆಯಿತು. ಹಸಿದ ಹೊಟ್ಟೆ ಕಾಯಿಸಬೇಡ. ಹಾಲು ಹೆಚ್ಚು ಬೇಕಾದರೆ ‘ಕೊಡು’ ಎಂದು ಲಕ್ಷ್ಮೀನಾರಾಯಣನಿಗೆ ಹೇಳಿ ಇಟ್ಟಿದ್ದೇನೆ. ಈಗ ನಮಸ್ಕಾರ ಮಾಡಿ ಹೋಗು.
ಶ್ರೀಧರ