“ಹಳದಿಪುರ ಅಗ್ರಹಾರದಲ್ಲಿ ರಾತ್ರಿ ವೇಳೆಯಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ..ಸತತ ದೂರು ಕೊಟ್ಟರೂ ಕಣ್ಮುಚ್ಚಿ ಕುಳಿತಿದೆ ಹೊನ್ನಾವರ ಕೆ.ಇ.ಬಿ”

ಸ್ಥಳಿಯ ನಿವಾಸಿಗಳ ಪ್ರಕಾರ ಹಳದಿಪುರ ಅಗ್ರಹಾರ ಭಾಗದಲ್ಲಿ ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವುದು ಕಳೆದ ತಿಂಗಳಿನಿಂದ ದಿನ ನಿತ್ಯದ ಗೋಳಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಹೊನ್ನಾವರ ಕೆ.ಇ.ಬಿಗೆ ದೂರವಾಣಿಯ ಮೂಲಕ ದೂರು ಸಲ್ಲಿಸಿದರೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ.

RELATED ARTICLES  ಅಡಿಕೆ ಮತ್ತು ಕಾಳುಮೆಣಸು ಸಾಗಿಸುತ್ತಿದ್ದ ಲಾರಿ ಪಲ್ಟಿ.

ಬದಲಾಗಿ ಸ್ಥಳೀಯ ಲೈನ್ ಮೆನ್ ಗಳ ಮೊಬೈಲ್ ನಂಬರನ್ನು ನೀಡುತ್ತಾರೆ, ಸ್ಥಳೀಯ ಲೈನ್ ಮೆನ್ ಗಳ ಮೊಬೈಲ್ ಗಳಂತೂ ಯಾವಾಗಲೂ ಇನ್ನೊಂದು ಕರೆಯಲ್ಲಿ ನಿರತವಾಗಿರುತ್ತದೆ. ಒಂದು ಕಡೆ ಸೆಖೆಯ ಹೊಡೆತದಿಂದ ನಿದ್ರಿಸುವುದೇ ಕಷ್ಟಕರ, ಜೊತೆಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆ.

RELATED ARTICLES  ಜೆಸಿಬಿ ಡಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

ಇನ್ನಾದರೂ ಗಮನಹರಿಸುವರೇ..ಸ್ಥಳೀಯ ಮುಖಂಡರು? ಸಂಭಂದ ಪಟ್ಟ ಇಲಾಖೆಯ ಅಧಿಕಾರಿಗಳು? ಸರಿಪಡಿಸುವರೇ ಲೋಪದೋಷಗಳನ್ನು? ದೂರ ಮಾಡಿಯಾರೇ ಸ್ಥಳಿಯರು ಅನುಭವಿಸುತ್ತಿರುವ ಕಷ್ಟಗಳನ್ನು?.
(ಹಳದಿಪುರ ಅಗ್ರಹಾರದ ನಿವಾಸಿಗಳ ವಿನಂತಿ)