ಹೊನ್ನಾವರ:ಹೊನ್ನಾವರದ ನವಿಲಗೋಣ ಮಾರ್ಗದ ಚಿಪ್ಪಿಹಕ್ಕಲದ ಮಾರ್ಗಮಧ್ಯದಲ್ಲಿ ಧರೆ ರಸ್ತೆಯ ಮೇಲೆ ಎರಗಲು ಹಾತೊರೆಯುತ್ತಿದೆ ಎಂಬಂತಿದೆ. ಯಮನ ರೂಪದಲ್ಲಿರುವ ಈ ಧರೆ ಜನರನ್ನು ಆಪೋಶನ ತೆಗೆದುಕೊಳ್ಳಲು ಕಾಯುತ್ತಿರುವಂತಿದೆ.ಈ ಮಾರ್ಗವಾಗಿ ಪ್ರತಿ ದಿನ ನೂರಾರು ಪ್ರಯಾಣಿಕರು ತಮ್ಮ ತಮ್ಮ ಕೆಲಸಕ್ಕೆ ತೆರಳುತ್ತಿದ್ದು ಧರೆ ಒಮ್ಮೆ ಉರುಳಿದರೆ ಬಡಜೀವ ಬಲಿಯಾಗುವುದು ಕಂಡಿತ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಇದೇ ಮಾರ್ಗದಲ್ಲಿ ಶಾಲೆಯ ಪುಟ್ಟ ಮಕ್ಕಳು ಶಾಲೆಗೆ ಹೋಗುವಾಗ ಈ ಯಮನ ಬಾಯನ್ನು ದಾಟಿಯೇ ಹೋಗಬೇಕು.ನೋಡಿಯು ನೋಡದಂತಿರು ಜನಪ್ರತಿನಿದಿಗಳು ಹಾಗೂ ಅಧಿಕಾರಗಳು ಇನ್ನಾದರೂ ಇತ್ತ ಗಮನಹರಿಸುವರೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಅನಾಹುತ ಆದನಂತರ ಪರಿಹಾರವನ್ನು ನೀಡುವದಕ್ಕಿಂತ ಸ್ವಲ್ಪಮಟ್ಟಿಗೆ ಗಮನಹರಿಸಿದರೆ ಅನಾಹುತವನ್ನೇ ತಪ್ಪಿಸಬಹುದಲ್ಲವೆ? ಎಂಬುದು ನಮ್ಮ ಆಶಯ.