ಇದು ಕುಮಟಾ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಾರದಾ ಶೆಟ್ಟಿ ಯವರ ಮನದಾಳದ ಮಾತು .

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾಗಿ ಐದು ವರುಷಗಳ ಅವಧಿಯನ್ನು ಪೂರ್ತಿಗೊಳಿಸಿದ ಶ್ರೀಮತಿ ಶಾರದಾ ಶೆಟ್ಟಿ ಯವರು “ಸತ್ವಾಧಾರ ನ್ಯೂಸ್” ಜೊತೆಗೆ ಮನಬಿಚ್ಚಿ ಮಾತನಾಡಿದರು .ಈ ಸಂದರ್ಭದಲ್ಲಿ ಪುತ್ರ ರವಿಕುಮಾರ್ ಶೆಟ್ಟಿಯವರೂ ಪಾಲ್ಗೊಂಡರು.
ಇವರನ್ನು “ಸತ್ವಾಧಾರ ನ್ಯೂಸ್” ಪರವಾಗಿ ಜಯದೇವ ಬಳಗಂಡಿ ಅವರು ನಡೆಸಿದ ಕಿರು ಸಂದರ್ಶನದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ .

ಚುನಾವಣೆ ಗೆ ಕ್ಷಣಗಣನೆ ನಡೆಯುತ್ತಿದೆ, ಚುನಾವಣಾ ತಯಾರಿ ಬಗ್ಗೆ ನಿಮ್ಮ ಅನಿಸಿಕೆ ?

ಚುನಾವಣೆಯ ಬಗ್ಗೆ ಭಯವಿಲ್ಲ ಐದು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿಯೇ ನಮ್ಮನ್ನು ಕೈಹಿಡಿಯಲಿದೆ ಎಂದು ಶಾರದಾ ಶೆಟ್ಟಿ ಉತ್ತರಿಸಿದರೆ ಎಲ್ಲೆಡೆಗಳಲ್ಲಿ ಅಭಿವೃದ್ಧಿಯ ಕಾರ್ಯ ಮಾಡಿಯಾಗಿದೆ, ಜನತೆಯ ಕಷ್ಟ ನಷ್ಟಗಳಿಗೆ ನಾವು ಸ್ಪಂದಿಸಿದ್ದೇವೆ, ಹಾಗಾಗಿ ಈ ಚುನಾವಣೆಯಲ್ಲಿ ಜನರೇ ಕೈ ಹಿಡಿದು ನಮ್ಮನ್ನು ನಡೆಸುತ್ತಾರೆ ಎಂಬ ಭರವಸೆ ಇದೆ ಎನ್ನೋದು ರವಿಕುಮಾರ ಶೆಟ್ಟಿ ಅವರ ಮಾತು . ಒಂದು ಹಂತದ ಪ್ರಚಾರ ಕಾರ್ಯ ಮುಗಿದಿದೆ ಇನ್ನೊಂದು ಸುತ್ತಿನ ಪ್ರಚಾರಕ್ಕಾಗಿ ಕಾರ್ಯಕರ್ತರು ಅಣಿಯಾಗುತ್ತಿದ್ದಾರೆ ಎಂದು ರವಿ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು .

RELATED ARTICLES  ಪ್ರೇಮಿಗಳ ದಿನದ ಭಾರೀ ಮಾರಾಟ: ದಿಢೀರ್ ಏರಿಕೆ ಕಂಡಿದೆ ಗುಲಾಬಿ ಹೂವುಗಳ ದರ.

ಚುನಾವಣಾ ನೀತಿ ಸಂಹಿತೆಯ ಬಗ್ಗೆ ನಿಮ್ಮ ಅನಿಸಿಕೆ ?

ಅತ್ಯಂತ ಕಠಿಣ ನೀತಿ ಸಂಹಿತೆ ಜಾರಿಯಲ್ಲಿದೆ. ಫ್ಲೆಕ್ಸ್ ಬ್ಯಾನರ್ಸ್ ಗಳ ಬಗ್ಗೆ ಬಿಗಿ ಜಾಸ್ತಿಯಾಯ್ತು , ಚಿಕ್ಕ ಚಿಕ್ಕ ಮೀಟಿಂಗ್ ಗಳಿಗೂ RTC ಕೊಡುವ ಪದ್ಧತಿ ಇದೆಲ್ಲ ಎಲ್ಲ ಕೆಲಸ ಕಾರ್ಯಗಳಿಗೂ ಕೊಂಚ ಶ್ರಮದ ಕೆಲಸವಾಗಿದೆ ಎಂಬುದು ರವಿಕುಮಾರ್ ಶೆಟ್ಟಿಯವರ ಮಾತು.

ನಿಮ್ಮ ಪ್ರಬಲ ಪ್ರತಿಸ್ಪರ್ಧಿ ಯಾರು ಎಂಬುದು ನಿಮ್ಮ ಅಭಿಪ್ರಾಯ?

ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯೇ ನಮ್ಮ ಪ್ರಬಲ ಪ್ರತಿಸ್ಪರ್ಧಿ . ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಎಂದರೂ ತಪ್ಪಲ್ಲ .ಉಳಿದೆಲ್ಲ ಪಕ್ಷಗಳು ಸಹ ಪ್ರಚಾರ ಭರಾಟೆಯಲ್ಲಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ಎಂಬುದು ನಮ್ಮ ಅನಿಸಿಕೆ .

ಜನತೆಯ ಸಮಸ್ಯೆಗಳ ಬಗ್ಗೆ ನೀವು ಹೇಳೋದು ?

ಈ ಪ್ರಶ್ನೆಗೆ ಉತ್ತರಿಸಿದ ಶಾರದಾ ಶೆಟ್ಟಿ ಅವರು ಬಿರುಬೇಸಿಗೆ ಜಾಸ್ತಿ ಇರುವುದರಿಂದ ನೀರಿನ ಸಮಸ್ಯೆ ಪ್ರಾರಂಭವಾಗಿದೆ. ಜನತೆಯ ನೀರಿನ ಸಮಸ್ಯೆ ಪರಿಹರಿಸಲು ತುರ್ತಾಗಿ ಟ್ಯಾಂಕರ್ ಮೂಲಕ ವ್ಯವಸ್ಥೆ ಮಾಡುತ್ತಿದ್ದೇವೆ. ಆದರೆ ಜನತೆಗೆ ಶಾಶ್ವತ ನೀರಿನ ಯೋಜನೆಯನ್ನು ಕಲ್ಪಿಸುವ ಮಹದಾಸೆ ಹೊಂದಿದ್ದೇವೆ, ಹಾಗಾಗಿ ಇನ್ನೊಮ್ಮೆ ಆಯ್ಕೆಯಾಗ ಬಯಸಿ ಜನತೆಯ ನೀರಿನ ಅವಶ್ಯಕತೆ ಪೂರೈಸಲು ಪ್ರಮುಖ ಕಾರ್ಯಗಳನ್ನು ಯೋಜಿಸಿಕೊಂಡಿದ್ದೇವೆ.

RELATED ARTICLES  ಕನಕದಾಸ ಜಯಂತಿ ಅರ್ಥಪೂರ್ಣ ಆಚರಣೆ.

ಈ ಸಮಯದಲ್ಲಿ ಜನತೆಯ ಸ್ಪಂದನೆ ಹೇಗಿದೆ?

ಜನತೆ ಅತ್ಯುತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಎಲ್ಲೆಡೆಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ನೀವು ಶಾಸಕರಾಗಿ ನಮಗೆ ಸಹಾಯ ಮಾಡಿದ್ದೀರಿ, ನಿಮಗೆ ನಾವು ಸಹಾಯ ಮಾಡುತ್ತೇವೆ ,ಇನ್ನೊಮ್ಮೆ ನಿಮ್ಮನ್ನೇ ಶಾಸಕರಾಗಿ ಆಯ್ಕೆ ಮಾಡುತ್ತೇವೆ ಎಂಬುದು ಜನತೆಯ ಒಕ್ಕೊರಲ ಅಂಬೋಣ.ಹೀಗಾಗಿ ಅವರ ಪ್ರೀತಿಗೆ ಹಾಗೂ ಅವರ ಬೆಂಬಲಕ್ಕೆ ನಾನು ಶರಣಾಗಿದ್ದೇನೆ.

ನಿಮ್ಮ ಪ್ರಚಾರ ವೈಖರಿ ಬಗ್ಗೆ ಮೆಚ್ಚುಗೆ ಇದೆ ಈ ಬಗ್ಗೆ ನಿಮ್ಮ ಅಭಿಪ್ರಾಯ?

ಪ್ರಚಾರ ನಿರಂತರವಾಗಿ ಸಾಗಿದೆ, ಪ್ರಚಾರಕ್ಕೆ ಕಳೆ ನೀಡುವ ಆಕರ್ಷಕ ವಾಹನವೊಂದನ್ನು ಸಜ್ಜುಗೊಳಿಸಿದ್ದೇವೆ. ಎಲ್ಲರನ್ನೂ ಆಕರ್ಷಿಸುವ ಈ ವಾಹನವೇ ನಮ್ಮ ಪ್ರಚಾರದ ಕೇಂದ್ರ ಬಿಂದುವಾಗಿದೆ. ಎಲ್ಲೆಡೆ ಪ್ರಚಾರದ ಭರಾಟೆ ಜೋರಾಗಿದೆ ,ಜನ ಸ್ಪಂದನೆಯೂ ಅತ್ಯುತ್ತಮವಾಗಿದೆ.

ಜನತೆಗೆ ನಿಮ್ಮ ಸಂದೇಶ?

ನಿಮ್ಮ ಸೇವೆಗಾಗಿ ಮತ್ತೊಮ್ಮೆ ಅವಕಾಶವನ್ನು ಮಾಡಿಕೊಡಿ, ಎಲ್ಲರ ಕಷ್ಟಕ್ಕೆ ನೆರವಾಗಿ ನಿಮ್ಮ‌ಜೊತೆಗೆ ಸಾಮಾಜಿಕ‌ ಸೇವೆ ಮಾಡುತ್ತೇನೆ. ಜನತೆಯ ಬೆಂಬಲವೇ ನಮಗೆ ಬಲ‌ ಎಂಬುದು ಎಲ್ಲರಿಗೂ ಗೊತ್ತು. ಜನತೆಗೆ ಸೇವೆ ಮಾಡುವ ಅವಕಾಶ ಇನ್ನೊಮ್ಮೆ ನೀಡಿ ಎಂದು ಜನರಲ್ಲಿ ಪ್ರಾರ್ಥಿಸುತ್ತೇವೆ.
ನಮಸ್ಕಾರ.

“ನಮಸ್ಕಾರ”.