ಭಾರತೀಯ ಜನತಾ ಪಕ್ಷದ ಬಲ ಪ್ರದರ್ಶನ ರೋಡ್ ಶೋ ಇಂದು ಕುಮಟಾ ನಗರಾದ್ಯಂತ ನಡೆಯಿತು.

ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಹಾಗೂ ಕೇಂದ್ರ ಮಂತ್ರಿ ಅನಂತಕುಮಾರ್ ಹೆಗಡೆ, ಅಧ್ಯಕ್ಷ ಕುಮಾರ ಮಾರ್ಕಾಂಡೆ ಹಾಗೂ ಪಕ್ಷದ ಇತರ ಮುಖಂಡರು ತೆರೆದ ವಾಹನದಲ್ಲಿ ಶಾಂತಿಕಾ ಪರಮೇಶ್ವರಿ ದೇವಾಲಯದಿಂದ ಸುಬಾಸ ರಸ್ತೆ, ಮಾರ್ಕೆಟ್, ಮೂರುಕಟ್ಟೆ, ಬಸ್ತಿಪೇಟೆ ಹಳೇ ಬಸ್ ನಿಲ್ದಾಣ ಮಾರ್ಗವಾಗಿ ಮಾಸ್ತಿಕಟ್ಟಾ ಸರ್ಕಲ್ ತನಕ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.

RELATED ARTICLES  ಗೋಕರ್ಣ ಗೌರವ ಕಾರ್ಯಕ್ರಮ

2 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.. ಕುಮಟಾದಾದ್ಯಂತ ಮೋದಿ ಜೈಕಾರ ಪ್ರತಿಧ್ವನಿಸಿತು.