ನಿನ್ನೆಯಂತೆ ಇಂದೂ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಭಾರಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಇದೇ ಹವಾಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಿನ್ನೆ ನಗರದಲ್ಲಿ ಸ್ವಲ್ಪ ತಡವಾಗಿ ಆರಂಭವಾಗಿದ್ದ ಮಳೆ ಇಂದು ಸಂಜೆ 4:30ಕ್ಕೆ ಆರಂಭವಾಗಿದೆ. ನಾಳೆ ಕೂಡಾ ಸಂಜೆ ಅಥವಾ ರಾತ್ರಿ ಮಳೆ ಆಗುವ ಸಂಭವ ಇದ್ದು ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

RELATED ARTICLES  ಅಳವೆಯ ಹೂಳಿನಲ್ಲಿ ಸಿಲುಕಿಕೊಂಡ ಬೋಟ್

ಭಾರಿ ಗುಡುಗು ಸಹಿತ ಮಳೆಯಿಂದಾಗಿ ನಗರದ ಮಲ್ಲೇಶ್ವರ, ಕೆಂಗೇರಿ, ಮೈಸೂರು ರಸ್ತೆ ಇನ್ನೂ ಹಲವು ಕಡೆ ರಸ್ತೆ ತುಂಬಿ ನೀರು ಹರಿದಿದ್ದು, ಟ್ರಾಫಿಕ್ ಉಂಟಾಗಿದೆ. ನಾಳೆ ಸಹ ಸಂಜೆ ವೇಳೆಗೆ ಮಳೆ ಪ್ರಾರಂಭವಾಗುವ ಸಾಧ್ಯತೆ ಇರುವ ಕಾರಣ ಮತದಾರರು ಬೇಗನೇ ಮತ ಚಲಾಯಿಸಿದರೆ ಉತ್ತಮ. ಇಂದು ಸಂಜೆ 4:30ಕ್ಕೆ ಮಳೆ ಪ್ರಾರಂಭವಾಗಿದ್ದು ನಾಳೆ ಸಹ ಹೀಗೆಯೇ ಆದರೆ ಮತದಾನ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಮಳೆಯ ಕಾರಣದಿಂದಾಗಿ ಮತದಾನ ಕಡಿಮೆ ಆದಲ್ಲಿ ಮುರೂ ಪಕ್ಷಗಳಿಗೆ ಸಮಸ್ಯೆ ಆಗಲಿದೆ.

RELATED ARTICLES  ಹಲವು ಸ್ವಾಮೀಜಿಗಳು ವಿಧಾನಸಭಾ ಚುನಾವಣಾ ಅಖಾಡಕ್ಕೆ ..!