ಇಕ್ಕಡಿಕೆ ಬರುವದು, ಕೆಮ್ಮು ಬರುವದು, ಉಸಿರುಗಟ್ಟಿದಂತಾಗುವದು, ದೊಡ್ಡ ನಿಟ್ಟಿಸುರು ಬಿಡುವದು, ಇವೆಲ್ಲ ಪ್ರಾಣಾಯಾಮದ ವ್ಯತ್ಯಯದ ಲಕ್ಷಣಗಳಾಗಿವೆ. ಇವನ್ನೆಲ್ಲ ಲಕ್ಷದಲ್ಲಿಟ್ಟು, ಪ್ರಾಣಾಯಾಮವನ್ನು ಉಪಾಯಪೂರ್ವಕ ಅಭ್ಯಾಸ ಮಾಡಬೇಕು.

(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಮೊದಲನೆಯ ಭಾಗ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

                                

                           || ಶ್ರೀರಾಮ ಸಮರ್ಥ ||

ಚಿ. ಪಂಡಿತನಿಗೆ ಆಶೀರ್ವಾದ,

ಪತ್ರ ಓದಿದೆ.

೧. ಯಾವ ಸ್ಥಳದಲ್ಲಿ ಧ್ಯಾನಕ್ಕೆ ಕುಳಿತಾಗ ಮನಸ್ಸು ಬೇಗನೆ ಏಕಾಗ್ರವಾಗುತ್ತದೆಯೋ, ಮನಸ್ಸು ಪ್ರಸನ್ನವಿರುತ್ತದೆಯೋ, ಒಳ್ಳೆಯ ವಿಚಾರ ಉತ್ಪನ್ನವಾಗುತ್ತವೆಯೋ ಆ ಸ್ಥಳದಲ್ಲೇ ಧ್ಯಾನಕ್ಕೆ ಕುಳಿತುಕೊಳ್ಳಬೇಕು. ಒಟ್ಟಿನಮೇಲೆ ಬ್ರಹ್ಮಪಿಶೆಯ ಸ್ಥಳ ನಿನಗೆ ವಿಶೇಷ ಅನುಕೂಲವಿದೆ. ಯಾವ ದಿವಸ ಗಾಳಿ-ಮಳೆಯಿಂದ ಅಲ್ಲಿ ಕುಳಿತುಕೊಳ್ಳಲಿಕ್ಕಾಗುವದಿಲ್ಲವೋ ಆ ದಿವಸ ಮಠದಲ್ಲೇ ಧ್ಯಾನಕ್ಕೆ ಕುಳಿತುಕೋ; ನೋಡು ಅದು ಹೇಗಾಗುತ್ತದೆ ಎಂದು.

RELATED ARTICLES  ಉತ್ತರಕನ್ನಡದಲ್ಲಿ ಇಂದು 613 ಜನರಿಗೆ ಕೊರೋನಾ ಪಾಸಿಟಿವ್ : ಎರಡು ಸಾವು.

೨. ಶರೀರದ ಆಕಾರ ಹೇಗೆ ಬೇರೆ-ಬೇರೆಯಾಗಿರುತ್ತದೆಯೋ ಅದೇ ರೀತಿ, ಆ ಆ ದೇವರ ಧ್ಯಾನದಲ್ಲಿ, ಅದಕ್ಕನುರೂಪವಾಗಿ ಕಾಣುವ, ಅವರ ಔಪಾಧಿಕ ಕಾಂತಿಯ ಬಣ್ಣವೂ ಬೇರೆ-ಬೇರೆ ಇರುತ್ತದೆ. ವಿಷ್ಣು ಪ್ರಕಾಶ ನೀಲವರ್ಣದ್ದಿರುತ್ತದೆ. ಪೀತವರ್ಣ ಬ್ರಹ್ಮದೇವರ ಪ್ರಕಾಶವಿರುತ್ತದೆ, ಕೆಂಪು ಬಣ್ಣ ಗಣಪತಿಯದ್ದು, ದೇವಿಯದ್ದು ಇರುತ್ತದೆ. ಬ್ರಹ್ಮಪ್ರಕಾಶ ಹೊಳೆಯುವ ಚಂದ್ರಬೆಳಕಿನ ಪ್ರಕಾಶದ ಶುಭ್ರ ಬೆಳ್ಳಂಬೆಳಕಿನಂತೆ ಇರುತ್ತದೆ.

೩. ಪೂರಕದಲ್ಲಿ ಒಳಗೆಳೆದುಕೊಂಡ ಶ್ವಾಸ ಒತ್ತಡದಿಂದ, ರೇಚಕದ ವೇಳೆ ಒಮ್ಮೆಲೇ ಹೊರಬರದಂತೆ, ಅದು ಪೂರಕದ ಎರಡು ಪಟ್ಟು ಸಾವಕಾಶ ಅನಾಯಾಸದಿಂದ ಬಿಡಲು ಬರುವಂತೆ, ಉಪಾಯದಿಂದ ಕುಂಭಕ ಮಾಡಬೇಕು. ರೇಚಕದ ನಂತರ ತಕ್ಷಣ ಪೂರಕ ಮಾಡಲಾಗದಿದ್ದಲ್ಲಿ ಕುಂಭಕ ಹೆಚ್ಚಾಯಿತೆಂದು ಅರಿತುಕೊಳ್ಳಬೇಕು. ರೇಚಕದ ನಂತರ ಮೊದಲಿನಂತೆ ಶಾಂತತೆಯಿಂದ ಸಾವಕಾಶ ಪೂರಕ ಮಾಡಲಾಗಲು ಶಕ್ಯವಿರುವ ವಿಧಾನದಲ್ಲಿ ಮಾತ್ರ ಕುಂಭಕ ಮಾಡಬೇಕು. ಪ್ರಾಣಾಯಾಮ ಮಾಡಿದಾಗ, ಬಿಕ್ಕಳಿಕೆ ಬರುವದು, ಕೆಮ್ಮು ಬರುವದು, ಉಸಿರುಗಟ್ಟಿದಂತಾಗುವದು, ದೊಡ್ಡ ನಿಟ್ಟಿಸುರು ಬಿಡುವದು, ಇವೆಲ್ಲ, ಪ್ರಾಣಾಯಾಮದಲ್ಲಿನ ವ್ಯತ್ಯಯದ ಲಕ್ಷಣಗಳು. ಇವನ್ನೆಲ್ಲ ಲಕ್ಷದಲ್ಲಿಟ್ಟು, ಪ್ರಾಣಾಯಾಮವನ್ನು ಉಪಾಯಪೂರ್ವಕ ಅಭ್ಯಾಸ ಮಾಡಬೇಕು.

RELATED ARTICLES  ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಜಿಲ್ಲಾಡಳಿತ.

(ಪತ್ರ ಎರಡನೆಯ ಭಾಗ ಮುಂದುವರಿಯುವದು)