ಹೊನ್ನಾವರ: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಹೊನ್ನಾವರದ ಕಡಗೇರಿಯ ಮಾಲಿನಿ ಮಂಜುನಾಥ ನಾಯ್ಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಪ್ರಸಕ್ತ ಸಾಲಿನಲ್ಲಿ ನಡೆದ ಎಂಎ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

RELATED ARTICLES  ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿರಾಯ? : ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಕವಿವಿ ಘಟಿಕೋತ್ಸವದಲ್ಲಿ ಡಾ. ಕೆ.ಚಂದ್ರಶೇಖರಯ್ಯ ಸುವರ್ಣ ಪದಕ, ಡಾ. ಎ.ಇ.ಪುನೀತ ಸನ್ಮಾನ ಸಮಿತಿಯ ಸುವರ್ಣ ಪದಕ, ಪ್ರೊ. ವಿ.ಟಿ.ಪಾಟೀಲ ನಗದು ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲೆ ಡಾ. ಸುಮಂಗಲಾ ಬಿ. ನಾಯಕ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತ ಪಡಿಸಿದ್ದಾರೆ.

RELATED ARTICLES  ದೇವಳಮಕ್ಕಿಯಲ್ಲಿ 11, 12ರಂದು ವಾಲಿಬಾಲ್ ಪಂದ್ಯಾವಳಿ