ಶಿರಸಿ : ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಅವರ ಶ್ರೀಮತಿಯವರೊಂದಿಗೆ ಶಿರಸಿಯಲ್ಲಿ ಮತ ಚಲಾಯಿಸಿದರು. ಮತ ಚಲಾವಣೆಯ ನಂತರ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು ” ಇದೊಂದು ಅಮೂಲ್ಯ ಅವಕಾಶ , ವಿಶೇಷ ದಿನ, ನಮ್ಮ ಜವಾಬ್ದಾರಿಯನ್ನು ಮತ್ತು ನಮ್ಮ ಹಕ್ಕನ್ನು ಚಲಾವಣೆ ಮಾಡುವ ದಿನ ಇದು, ನಮಗೆ ಬೇಕಾದ ಸರಕಾರರವನ್ನು ಆಯ್ದುಕೊಳ್ಳಲು ಸಂವಿಧಾನ ಕೊಟ್ಟ ಕೊಟ್ಟ ಅವಕಾಶ, ನಮಗೆ ಬೇಕಾದ ನಾಯಕರ ಅಡಿಯಲ್ಲಿ ನಮ್ಮ ಪ್ರಭುತ್ವವನ್ನು ಆಯ್ದುಕೊಳ್ಳಲು ನಮ್ಮ ಹಿರಿಯರು ಮಾಡಿಕೊಟ್ಟ ಅವಕಾಶ ಇದು… ಇಂದು ಮತದಾನ ಮಾಡಿದ್ದು ನನಗೆ ಖುಷಿ ಕೊಟ್ಟಿದೆ” ಎಂದರು.

RELATED ARTICLES  ಚಳುವಳಿಯಿಂದಷ್ಟೇ ಬೋಧಕರ ಹಿತರಕ್ಷಣೆ ಸಾಧ್ಯ: ಕುಬೇರಪ್ಪ

ಜನಪರ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು,”ಬಿಜೆಪಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಹೊಸ ವ್ಯವಸ್ಥೆಯೊಂದನ್ನ ನಾವು ನಿರೀಕ್ಷಿಸಬಹುದು. ಇಡೀ ಜನಸಮುದಾಯವನ್ನು ಒಟ್ಟಿಗೆ ಅಭಿವೃದ್ಧಿಯತ್ತ ಕೊಂಡೊಯ್ಯುವ ಬಿಜೆಪಿಯ ಕನಸು ನನಸಾಗಲಿದೆ. ಕರ್ನಾಟಕದಲ್ಲಿ ಚುನಾವಣೆಗೆ ಮತದಾರರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದರು.

RELATED ARTICLES  ಶಿರಸಿ ಜಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಬರಬೇಕಂತೆ! ಪತ್ರ ಬರೆದು ತಿಳಿಸಿದ್ದಾಳೆ ಅಮೃತಾ