ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.) ಇವರು ನಡೆಸುವ ಯಕ್ಷಗಾನ ಕೇಂದ್ರದ 2018-19 ನೇ ಸಾಲಿನ ಯಕ್ಷಗಾನ ತರಬೇತಿಯ ಪ್ರವೇಶಕ್ಕಾಗಿ ಅರ್ಜಿಯನ್ನು ಅಹ್ವಾನಿಸಲಾಗಿದೆ.

ವಿದ್ಯಾರ್ಹತೆ 5 ನೇ ತರಗತಿ ಅಥವಾ ಕನ್ನಡ ಓದಲು, ಬರೆಯಲು ತಿಳಿದಿರಬೇಕು. ಅನುಭವ, ಆಸಕ್ತಿ, ವಯಸ್ಸು, ಸ್ಪಷ್ಟವಾದ ವಿಳಾಸದೊಂದಿಗೆ ಅರ್ಜಿಪತ್ರವನ್ನು ಕೆಳಗಿನ ವಿಳಾಸಕ್ಕೆ ಕಳಿಸಬೇಕು. ಆಯ್ಕೆಯಾದವರಿಗೆ ಉಚಿತ ಊಟ, ವಸತಿ, ಶಿಕ್ಷಣವನ್ನು ಹಾಗೂ ವಿದ್ಯಾರ್ಥಿವೇತನ ಕೂಡಾ ನೀಡಲಾಗುವುದು.

ಗುರುಕುಲದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಹೊರತಾಗಿ ಅನ್ಯ ಯಕ್ಷಗಾನಾಸಕ್ತರಿಗೆ ಕೂಡಾ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಮತ್ತು ರಜಾದಿನಗಳಲ್ಲಿ ತರಬೇತಿ ಪಡೆಯಬಹುದು. ಸುತ್ತಮುತ್ತಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೂಡಾ ಯಕ್ಷಗಾನ ಶಿಕ್ಷಣವನ್ನು ನೀಡಲಾಗುವುದು.

RELATED ARTICLES  ಬುಧವಾರ ಕುಮಟಾದ ಹಲವೆಡೆ ವಿದ್ಯುತ್ ವ್ಯತ್ಯಯ

ಕೆರೆಮನೆ ಶಿವಾನಂದ ಹೆಗಡೆ
ನಿರ್ದೇಶಕ,
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.)
ಅಂಚೆ: ಗುಣವಂತೆ, ತಾ: ಹೊನ್ನಾವರ, ಉ. ಕ. – 581 348
ದೂರವಾಣಿ: 08387-234188, ಮೊ. 9480516300

RELATED ARTICLES  ಉತ್ತರಕನ್ನಡದಲ್ಲಿ ಮತ್ತೆ ಏರಿದ ಕೊರೋನಾ ಪ್ರಕರಣ

ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಗುಣವಂತೆಯ ಸಂಕ್ಷಿಪ್ತ ಪರಿಚಯ
ಸ್ಥಾಪನೆ: 1986
ಉದ್ದೇಶ: ಯಕ್ಷಗಾನ ರಂಗಶಿಕ್ಷಣ
ಅವಧಿ: 1 ವರುಷ
ಗರಿಷ್ಠ ಅವಧಿ: 3 ವರುಷ
ಕನಿಷ್ಠ ಅವಧಿ: 1 ವರುಷ
ವಿಧಾನ: ಗುರುಕುಲ ಶಿಕ್ಷಣ
ಪಠ್ಯ: ಯಕ್ಷಗಾನ ಸಂಗೀತ, ನೃತ್ಯ, ಅಭಿನಯ, ಮಾತು, ವೇಷಭೂಷಣ, ಮದ್ದಲೆ, ಪ್ರಸಂಗ ಅಧ್ಯಯನ, ಯೋಗ ಇತ್ಯಾದಿ.
ಸಂಸ್ಥಾಪಕ ನಿರ್ದೇಶಕರು: ಕೆರೆಮನೆ ಶಂಭು ಹೆಗಡೆ
ನಿರ್ದೇಶಕ: ಕೆರೆಮನೆ ಶಿವಾನಂದ ಹೆಗಡೆ