ಮೈಸೂರು: ಚುನಾವಣೆಗೂ ಮುನ್ನ ಮುಂದಿನ ಸಿಎಂ ನಾನೇ ಎಂದು ಕಾನ್ಫಿಡೆನ್ಸ್​​ನಿಂದ ಹೇಳಿದ್ದ ಸಿಎಂ ಸಿದ್ದರಾಮಯ್ಯ ಇದೀಗ ದಲಿತ ಅಭ್ಯರ್ಥಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ದಲಿತ ಕೂಗು ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕಮಾಂಡ್ ತೀರ್ಮಾನ ಮಾಡಿದ್ರೆ ನನ್ನ ತಕರಾರಿಲ್ಲ. ದಲಿತ ಸಿಎಂ ಒಮ್ಮೆಲೇ ಮಾಡಲು ಸಾಧ್ಯವಿಲ್ಲ, ಶಾಸಕರ ಸಮ್ಮತಿ ಬೇಕು ಅಂತ ಹೇಳಿದ್ರು.

RELATED ARTICLES  ಹೆಬಳೆಯ ಶ್ರೀ ಶೇಡಬರಿ ಜಟಗಾ ಮಹಾಸತಿ ದೇವಸ್ಥಾನದ ಹತ್ತೊಂಬತ್ತನೆಯ ವರ್ಷದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಯಶಸ್ವಿ

ರಾಜ್ಯ ಚುನಾವಣಾ ಫಲಿತಾಂಶ ಲೋಕಸಭೆಯ ಚುನಾವಣೆಗಷ್ಟೇ ಅಲ್ಲ. ದೇಶದ ಚುನಾವಣೆಗೆ ಅಡಿಗಲ್ಲು. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ರಾಜಸ್ಥಾನ, ಮಧ್ಯಪ್ರದೇಶ ಚುನಾವಣೆ ಬರಲಿದೆ. ಆ ಚುನಾವಣೆಗಳನ್ನ ಗೆದ್ದು ದೇಶವನ್ನು ಹಿಡಿತಕ್ಕೆ ತಗೆದುಕೊಳ್ಳುತ್ತೇವೆ ಎಂದು ಹೇಳಿದ್ರು.

ನಾನು ಎರಡೂ ಕಡೆಗಳಲ್ಲಿ ಗೆಲ್ಲುವೆ. ಬಾದಾಮಿಯಲ್ಲಿ ಹೆಚ್ಚು ಬಹುಮತ ಬರಲಿದೆ. ಚಾಮುಂಡೇಶ್ಚರಿಯಲ್ಲಿ ಕೂಡ ಗೆಲ್ಲುವೆ, ಆದ್ರೆ ನಿರೀಕ್ಷೆ ಮಟ್ಟದ ಲೀಡ್ ಬರದಿರಬಹುದು. ಜಿ.ಟಿ.ದೇವೇಗೌಡ ಹೆಚ್ಚು ಹಣ ಖರ್ಚು ಮಾಡಿದ್ದಾನೆ. ಆದ್ರೆ ಹಣ ಎಲ್ಲಿಂದ ಬಂತು ಅಂತಾ ಗೊತ್ತಿಲ್ಲ. ಹಣಕ್ಕೆ ಹೆಚ್ಚು ಮನ್ನಣೆ ಕೊಡ್ತಾರೆ ಅಂತಾ ನನಗೆ ಅನಿಸಲ್ಲ ಅಂದ್ರು.
ಸಮಿಶ್ರ ಸರ್ಕಾರದ ಬಗ್ಗೆ ವಿವಿಧ ಸರ್ವೆಗಳ ಬಗ್ಗೆ ಸಿಎಂ ಪ್ರತಿಕ್ರಿಯಿಸಿ, ಸಮಿಶ್ರ ಸರ್ಕಾರ ಬರತ್ತೆ ಅನ್ನೋ ಸಮೀಕ್ಷೆ ಸತ್ಯ ಇರಬಹುದು, ಸಂಪೂರ್ಣ ನಂಬಲು ಸಾಧ್ಯವಿಲ್ಲ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ರು.

RELATED ARTICLES  "ಗೋಕರ್ಣ ಗೌರವ" 385 ನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಬಸವರಾಜ ಸ್ವಾಮಿಗಳು