ನವದೆಹಲಿ: 2016 ರಲ್ಲಿ ಜಮ್ಮು&ಕಾಶ್ಮಿರದ ಉರಿಯಲ್ಲಿ ನಡೆದ ಉಗ್ರರ ದಾಳಿಯಿಂದ ಕೇಂದ್ರ ಸರ್ಕಾರ ಪಾಠ ಕಲಿತಿದೆ. ಆ ಸಂದರ್ಭದಲ್ಲಿ, ಕೇಂದ್ರ ಸರ್ಕಾರಕ್ಕೆ ತೀವ್ರಸ್ವರೂಪದ ಯುದ್ಧ ನಡೆದರೆ, ಕನಿಷ್ಟ ಹತ್ತು ದಿನಗಳಿಗೆ ಆಗುವಷ್ಟು ಶಸ್ತ್ರಾಸ್ತ್ರಗಳು ಆರ್ಮಿಯ ಬತ್ತಳಿಕೆಯಲ್ಲಿ ಇಲ್ಲ ಅನ್ನೋದನ್ನು ಕಂಡುಕೊಂಡ ಸರ್ಕಾರ ಇದೀಗ ಸೇನಾ ಬತ್ತಳಿಕೆಯನ್ನ ತುಂಬಿಸಲು ಹೊರಟಿದೆ.
ಈ ಸಂಬಂಧ ಈಗಾಗಲೇ 24 ಸಾವಿರ ಕೋಟಿ ರೂಪಾಯಿಯ ಡೀಲ್ ಅನ್ನ ರಷ್ಯಾ ಹಾಗೂ ಇಸ್ರೇಲ್ ಜೊತೆಗೆ ಮಾಡಿಕೊಂಡಿರುವ ಸರ್ಕಾರ, ಶಸ್ತ್ರಾಸ್ತ್ರಗಳ ಬಿಡಿಭಾಗಗಳು ಹಾಗೂ ಇಂಜಿನ್ಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಮತ್ತೊಂದೆಡೆ 11.740 ಕೋಟಿ ರೂಪಾಯಿ ಮೌಲ್ಯದ ಡೀಲ್ ನಲ್ಲಿ, ಸ್ಮರ್ಚ್ ರಾಕೆಟ್, ಕಂಗೂರ್ಸ್ ಌಂಟಿ ಟ್ಯಾಂಕ್ ಗೈಡೆಡ್ ಮಿಸೈಲ್, 125 ಎಂಎಂಎಂ ಎಪಿಎಫ್ಎಸ್ಡಿಎಸ್ ಶಸ್ತ್ರಗಳನ್ನ ಉತ್ಪಾದಿಸಲು ಹೊರಟಿದೆ.
ದೇಶಿ ಉತ್ಪಾದಕ ಸಂಸ್ಥೆಗಳಿಂದ ಸರ್ಕಾರ ಈ ಮೊತ್ತದ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡಲು ಹೊರಟಿದೆ. ಇನ್ನು ಹೊಸ 15 ಸಾವಿರ ಕೋಟಿ ಮೊತ್ತದ ಯೋಜನೆಯಲ್ಲಿ ಸರ್ಕಾರ ಅಂಡರ್ ಬ್ಯಾರಲ್ ಗ್ರೆನೇಡ್ ಲಾಂಚರ್ಸ್, ಆಟೋಮ್ಯಾಟಿಕ್ ಗ್ರೆನೇಡ್ ಲಾಂಚರ್ಸ್, 122 ಎಂಎಂ ಗ್ರಾಡ್ ರಾಕೆಟ್ಸ್, ಎಲೆಕ್ಟ್ರಾನಿಕ್ ಫ್ಯೂಜ್ಸ್ 30 ಎಂಎಂ ಹೈ ಎಕ್ಸ್ಪ್ಲೋಸಿವ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಉದ್ದೇಶಿಸಿದೆ.