ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ, ಇತ್ತ ಚುನಾವಣೆ ಮುಗಿಯುತ್ತಿದ್ದಂತೆ ಬೆಲೆ ಮತ್ತೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಬರೊಬ್ಬರಿ 76.01 ರೂಪಾಯಿಗಳಾಗಿದೆ.
ಒಂದು ಲೀಟರ್ ಪೆಟ್ರೋಲ್‍ಗೆ 17 ಪೈಸೆ, ಡೀಸೆಲ್‍ಗೆ 21 ಪೈಸೆಯಷ್ಟು ಹೆಚ್ಚಳವಾಗಿದ್ದು, ಪ್ರತೀ ರಾಜ್ಯಗಳ ಚುನಾವಣೆಯ ವೇಳೆ ಪೆಟ್ರೋಲ್ ಹಾಗೂ ಡೀಸೆಲೆ ಬೆಳೆಗಳಲ್ಲಿ ಕಡಿತಮಾಡಿ ಚುನಾವಣೆಯ ನಂತರ ಬೆಲೆಯೇರಿಕೆ ಮಾಡುವ ತಂತ್ರವು ಮುಂದುವರಿದಿದೆ.
ಗುಜರಾತ್ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಇಳಿಸಲ್ಪಟ್ಟಿದ್ಗ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳು ಚುನಾವಣೆ ಮುಗಿದ ಬಳಿಕ ಮತ್ತೆ ಏರಿಸಲ್ಪಟ್ಟಿತ್ತು. ಕರ್ನಾಟಕ ಚುನಾವಣೆಯ ಸಮಯದಲ್ಲೂ ಕೂಡ ಇದೇ ತಂತ್ರವನ್ನು ಅನುಸರಿಸಲಾಗಿತ್ತು. ಮೂಲಗಳ ಪ್ರಕಾರ ಪೆಟ್ರೋಲ್ ಲೀಟರ್‍ಗೆ 3 ರೂಪಾಯಿಯಷ್ಟು, ಡೀಸೆಲ್ 1 ರೂಪಾಯಿ 50 ಪೈಸೆಯಷ್ಟು ದುಬಾರಿಯಾಗಲಿದೆ.