ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿಯಲ್ಲಿ ದಿ:19.05.2018ರಂದು ಉಪ್ಪಿನಕಾಯಿ ಮೇಳ (ಪ್ರದರ್ಶನ ಮತ್ತು ಮಾರಾಟ) ಹಾಗೂ ಕಿಡ್ಸ್ ಫನ್ ಡೇ (ಒಂದು ದಿನದ ಮಕ್ಕಳ ಮಜಾ ದಿನ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಉಪ್ಪಿನಕಾಯಿ ಮೇಳದಲ್ಲಿ ಭಾಗವಹಿಸುವವರು ಉಪ್ಪಿನಕಾಯಿಯನ್ನು ಮನೆಯಲ್ಲಿಯೇ ಇದೇ ವರ್ಷ ತಯಾರಿಸಿರಬೇಕು. ಹೀಗೆ ತಯಾರಿಸಿದ ಉಪ್ಪಿನಕಾಯಿಗೆ ಯಾವುದೇ ರೀತಿಯ ಸಂರಕ್ಷಕಗಳನ್ನು (ರುಚಿಯ ಪುಡಿ, ವಿನೆಗರ್ ಇತ್ಯಾದಿ)ಉಪಯೋಗಿಸಿರಬಾರದು. ವಾರ್ಷಿಕವಾಗಿ ಒಮ್ಮೆ ತಯಾರಿಸುವ ಮಾವಿನ ಮಿಡಿ ಉಪ್ಪಿನಕಾಯಿ ಹಾಗೂ ಇತರೇ ಉಪ್ಪಿನ ಕಾಯಿಗಳನ್ನು ಪ್ರತ್ಯೇಕವಾಗಿ ಸ್ಪರ್ಧೆಗೆ ಪರಿಗಣ ಸಲಾಗುವುದು. ಇದರ ಜೊತೆಯಲ್ಲಿ ಸ್ಪರ್ಧಾಳುಗಳು ತಂದ ಉಪ್ಪಿನಕಾಯಿಗಳನ್ನು ಮಾರಾಟ ಮಾಡಲು ಸಹ ಅವಕಾಶ ಕಲ್ಪಿಸಲಾಗಿದೆ.

RELATED ARTICLES  ಜ.12ರಿಂದ 15ರವರೆಗೆ ಗೋದಿನ ಹಾಗೂ ಆಲೆಮನೆ ಹಬ್ಬ

ಇದೇ ಸಂದರ್ಭದಲ್ಲಿ 08 ರಿಂದ 13 ವರ್ಷದ ವಯೋಮಿತಿಯ ಮಕ್ಕಳಿಗೆ ಮನರಂಜನೆ-ಮನೋವಿಕಾಸದ ಸಲುವಾಗಿ ಗಾಳಿಪಟ ತಯಾರಿಸಿ ಹಾರಿಸುವುದು, ಚಿತ್ರಕಲೆ ಸ್ಪರ್ಧೆ, ಗುಂಪು ಆಟ, ಹಾವುಗಳ ಕುರಿತು ಪ್ರಾತ್ಯಕ್ಷಿಕ ಮಾಹಿತಿ, ಹಾಗೂ ಜಾದೂ ಪ್ರದರ್ಶನ, ಮತ್ತಿತರ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ಮಕ್ಕಳಿಗೆ ಉಡುಗೊರೆ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಚ್ಚಿಸುವವರು ದಿ:17.05.2018ರ ಒಳಗಾಗಿ ಸಂಘದ ಸುಪರ್ ಮಾರ್ಕೆಟ್ ರಿಸೆಪ್ಷನ್ ಕೌಂಟರ್ ಅಥವಾ ಪ್ರಧಾನ ಕಛೇರಿ ಗಣಕಯಂತ್ರ ವಿಭಾಗವನ್ನು ಸಂಪರ್ಕಿಸಬೇಕಾಗಿ ಶಾಂತಾರಾಮ ವಿ. ಹೆಗಡೆ, ಶೀಗೇಹಳ್ಳಿ ಅಧ್ಯಕ್ಷರು ಟಿ.ಎಸ್.ಎಸ್. ಲಿ., ಶಿರಸಿ ಇವರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಸಾಂಪ್ರದಾಯಿಕ ವೈದ್ಯರು ನಮ್ಮ ರಾಜ್ಯದ ಹೆಗ್ಗಳಿಕೆ, ಅವರ ಕೊಡುಗೆ ಅವಿಸ್ಮರಣಿಯ.-ಎಸ್.ಪಿ.ಶೇಷಾದ್ರಿ