ಕುಮಟಾ:ಕುಮಟಾ ತಾಲೂಕಿನ ಹೊಲಗದ್ದೆ ಗ್ರಾಮ ಪಂಚಾಯತಿ‌ಗೆ ಸಂಬಂಧಪಟ್ಟ ಚಿತ್ರಗಿ ಮದ್ಗುಣಿ ಗ್ರಾಮದ ನಾಗಮಹಾಸತಿ ಕಾಲೋನಿ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಸ್ಥಳಿಯರು ಅರ್ಜಿ ಮೂಲಕ ಪಂಚಾಯತಿಗೆ ರಸ್ತೆ ಸರಿಪಡಿಸುವಂತೆ ಮನವಿ ನೀಡಿದ್ದರು.

RELATED ARTICLES  ಬ್ರಾಹ್ಮಣ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಚ್.ಆರ್.ಗಣೇಶ ಹೊಸಾಕುಳಿ.

ಗ್ರಾಮ ಪಂಚಾಯತ್ ಸದಸ್ಯರಾದ ಈಶ್ವರ ಪಟಗಾರ ಹಾಗೂ ತಾಲೂಕಾ ಪಂಚಾಯತ್ ಸದಸ್ಯ ಜಗನ್ನಾಥ ನಾಯ್ಕ ಇವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲಿಸಿ ಅಲ್ಲಿಂದಲೇ ಕಾಂಗ್ರೆಸ್ ಮುಖಂಡರಾದ ಶ್ರೀ ರವಿಕುಮಾರ ಶೆಟ್ಟಿಯವರಿಗೆ ಕರೆ ಮಾಡಿದರು ಕರೆ ಮಾಡಿದ ಕೂಡಲೆ ಸ್ಪಂದಿಸಿದ ರವಿಕುಮಾರ ಶೆಟ್ಟಿಯವರು ಸ್ಥಳಕ್ಕೆ ಬಂದು ಜನರ ಒತ್ತಾಯದಂತೆ ರಸ್ತೆ ಕಾಂಕ್ರೀಟ್ ಮಾಡಲು ಐದು ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಾರೆ.

RELATED ARTICLES  ಸ್ವತಃ ಸತೀಶ ಸೈಲ್ ಸಹ ಬಿಜೆಪಿಗೆ ಮತ ಹಾಕಲಿದ್ದಾರೆ ಎಂಬ ಭರವಸೆ ನನಗಿದೆ : ನಾಗರಾಜ ನಾಯಕ