ಕಾರವಾರ: ಭಟ್ಕಳ ಕ್ಷೇತ್ರದಲ್ಲಿ ಈ ಬಾರಿ ಸುನಿಲ್ ನಾಯ್ಕ ಗೆಲ್ಲುವ ಮೂಲಕ ಬಿಜೆಪಿ ತನ್ನ ಖಾತೆ ತೆರೆದಿದೆ.ಸುನಿಲ್‌ ನಾಯ್ಕ ಗೆಲುವಿನ ನಗೆ ಬೀರಿದ್ದಾರೆ.ವಿಶೇಷ ಎಂದರೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ತಮ್ಮ ‘ರಾಜಕೀಯ ಗುರು’ ಎಂದು ಪರಿಗಣಿಸಿರುವ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಗುರುವೇ ಸಾಥ್ ನೀಡಿದ್ದರು.

2004ರಲ್ಲಿ ಮೋಹನ್ ಪಿ.ಸಿ ಅವರು ಕಾಂಗ್ರೆಸ್‌ನ ಸತ್ಯನಾರಾಯಣ ಸ್ವಾಮಿ ಅವರ ವಿರುದ್ಧ ಗೆಲುವು ಸಾಧಿಸಿದ ಬಳಿಕ, 2008ರ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ ಕಾಂಗ್ರೆಸ್‌ನ ಕೈ ವಶವಾಗಿತ್ತು.

ಬಳಿಕ 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕ ಮಂಕಾಳ ವೈದ್ಯ ಗೆದ್ದ ಬಳಿಕ ಈ ಬಾರಿ ಅಲ್ಲಿ ಕೇಸರಿಯ ರಂಗು ಮೂಡಿದೆ. ಅದು ಕೂಡ ಭರ್ಜರಿ ಮತಗಳ ಅಂತರದಲ್ಲಿ ಬಿಜೆಪಿಯ ಅಭ್ಯರ್ಥಿ ಸುನೀಲ್ ನಾಯ್ಕ ಗೆಲುವು ಸಾಧಿಸುವುದು ಬಿಜೆಪಿಗರಿಗೆ ಹೇಳಲಾರದ ಸಂತೋಷ ಉಂಟು ಮಾಡಿದೆ.

RELATED ARTICLES  ಎಸ್.ಡಿ.ಎಮ್ ಮಹಾ ವಿದ್ಯಾಲಯದಲ್ಲಿ ವನ ಮಹೋತ್ಸವ

ವಿಧಾನಸಭೆಗೆ ಸುನೀಲ್ ನಾಯ್ಕ ಈ ಬಾರಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದರು. ತಂದೆ ಬಿಳಿಯಾ ನಾಯ್ಕ ಪಂಚಾಯ್ತಿ ಅಧ್ಯಕ್ಷರಾಗಿದ್ದವರು. ಅವರ ಬಳಿಕ ಸುನೀಲ್ ಬ್ಯಾಂಕ್‌ಗಳ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ರಾಜಕೀಯ ರಂಗ ಪ್ರವೇಶಿದ್ದರು.

ಕಳೆದ 2013ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಪ್ರತ್ಯೇಕವಾಗಿದ್ದ ಕಾರಣ ಕಾರ್ಯಕರ್ತರು ಗೊಂದಲದಲ್ಲಿದ್ದರು. ಆದರೆ, ಈ ಬಾರಿಯೂ ಆರಂಭದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಹತ್ತಾರು ಸಂಖ್ಯೆಯಲ್ಲಿದ್ದ ಆಕಾಂಕ್ಷಿಗಳು ನಿಧಾನಕ್ಕೆ ತೆರೆಗೆ ಸರಿದಿದ್ದರು. ಅಂತಿಮವಾಗಿ ಸುನೀಲ ನಾಯ್ಕ ಅವರಿಗೆ ಟಿಕೆಟ್ ದೊರೆಯಿತು. ಅವರೇ ಹೇಳುವ ಪ್ರಕಾರ, ‘ಕಳೆದ ಬಾರಿ ಗೊಂದಲದಲ್ಲಿದ್ದ ಕಾರ್ಯಕರ್ತರನ್ನೆಲ್ಲ ಒಗ್ಗೂಡಿಸಿ ಕ್ಷೇತ್ರದಲ್ಲಿ ಪಕ್ಷಕ್ಕೆ ಭದ್ರ ತಳಹದಿ ಹಾಕಲು ಶ್ರಮಿಸಿದ್ದೆ. ನನ್ನ ಪಕ್ಷನಿಷ್ಠೆ ಹಾಗೂ ಪರಿಶ್ರಮವನ್ನು ಗಮನಿಸಿದ್ದ ವರಿಷ್ಠರು ನನಗೆ ಟಿಕೆಟ್ ನೀಡಿದ್ದರು’ ಎಂದಿದ್ದರು.

ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿ ಬಿಜೆಪಿಗೆ ಬಂದಿರುವುದರಿಂದ ಕೆಲವು ಬಿಜೆಪಿಗರು ಮೊದಲು ಇವರ ಪಕ್ಷದ ಸೇರ್ಪಡೆಗೆ ತಗಾದೆ ಎತ್ತಿದ್ದರು. ಆದರೆ, ಅವರ ರಾಜಕೀಯ ಚಾತುರ್ಯ ಹಾಗೂ ಯುವ ಜನರೊಂದಿಗೆ ಬೆರೆಯುವ ಗುಣ ಈ ಬಾರಿಯ ಚುನಾವಣೆಯಲ್ಲಿ ಅವರ ಕೈ ಹಿಡಿದಿದೆ. ಜತೆಗೆ, ಕಾಂಗ್ರೆಸ್‌ಗೆ ತಂಜೀಮ್ ಬೆಂಬಲ ವ್ಯಕ್ತಪಡಿಸಿದ್ದು ಸಹ ಸುನೀಲ್ ನಾಯ್ಕಗೆ ಪ್ಲಸ್ ಪಾಯಿಂಟ್ ಆಗಿತ್ತು.

RELATED ARTICLES  ಜಿಲ್ಲಾ ಪಂಚಾಯತಿಯ 2020- 21ನೇ ಸಾಲಿನ ಬಜೆಟ್ ಮಂಡನೆ

ಭಟ್ಕಳದಲ್ಲಿ 2,14,694 ಮಂದಿ ಮತದಾರರಿದ್ದಾರೆ. ಅದರಲ್ಲಿ 1,65,207 ಮತಗಳು ಈ ಬಾರ ಚಲಾವಣೆಯಾಗಿದ್ದವು. ಶೇ 76.95 ಮತಗಳು ಈ ಬಾರಿ ಚಲಾವಣೆಯಾಗಿತ್ತು.

2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ ಮಂಕಾಳ ಸುಬ್ಬ ವೈದ್ಯ 37,319 ಮತಗಳನ್ನು ಪಡೆದು, ಜೆಡಿಎಸ್ ಅಭ್ಯರ್ಥಿ ಇನಾಯತ್ ಉಲ್ಲಾ ಶಾಬಂದ್ರಿ ವಿರುದ್ಧ (27,435) 9,884 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ 83,172 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ (77,242) ಅವರಿಗಿತಂತ 5,930 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.