ಕಾರವಾರ: ಕಾರವಾರ ಅಂಕೋಲಾ ವಿಧಾನಾಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಪೂರ್ತಿ ಯಾಗಿದ್ದು ಬಿಜೆಪಿ ಅಭ್ಯರ್ಥಿ ರೂಪಾಲಿ ಸಂತೋಷ್ ನಾಯ್ಕ ಭರ್ಜರಿಯಾಗಿ ಗೆಲವು ಸಾಧಿಸಿದ್ದಾರೆ.
ರೂಪಾಲಿ ಸಂತೋಷ್ ನಾಯ್ಕ ರವರಿಗೆ ಆಭಿಮಾನಿಗಳು ಬಿಜೆಪಿ ಕಾರ್ಯಕರ್ತರುಗಳಿಂದ ವಾಟ್ಸಪ್, ಫೇಸ್ಬುಕ್, ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರೂಪಾಲಿ ನಾಯ್ಕ ಅವರು ಎಲ್ಲರೊಂದಿಗೆ ಸಹಜವಾಗಿ ಮಾತ್ನಾಡುತ್ತಾರೆ ಹಾಗೂ ಭರವಸೆ ಕೊಟ್ಟ ಮೇಲೆ ಮಾಡೇ ಮಾಡುತ್ತಾರೆ ಎಂಬುದು ಅವರ ಅಭಿಮಾನಿಗಳ ಅನಿಸಿಕೆ .
ಬಡತನದಲ್ಲಿ ಮೇಲೆ ಬಂದ ರೂಪಾಲಿ ನಾಯ್ಕ ಅವರಗೆ ಈ ಚುನಾವಣಾ ಯುದ್ಧವೇ ಆಗಿತ್ತು ಅಂದ್ರು ತಪ್ಪು ಆಗಲಾರದು.
ಘಟಾನುಘಟಿಗಳ ಮಧ್ಯೆ ಬಾರಿ ಕುತೂಹಲ ಮೂಡಿಸಿದ ಅಂಕೋಲಾ ಕಾರವಾರ ಕ್ಷೇತ್ರದ ಈ ಚುನಾವಣೆಯ ಕೊನೆಯಲ್ಲಿ ರೂಪಾಲಿ ನಾಯ್ಕ ಅವರಿಗೆ ಗೆಲುವು ದೊರೆತಿದೆ.
ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖಕಕ್ಕೆ ಮತದಾರ ಅವಕಾಶ ನೀಡಿದ್ದಾನೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ರೂಪಾಲಿ ನಾಯ್ಕ (59,776) ಅಂತಿಮವಾಗಿ 13,809 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಜೆಡಿಎಸ್ ನ ಆನಂದ್ ಅಸ್ನೋಟಿಕರ್ ಎರಡನೇ ಸ್ಥಾನದಲ್ಲಿದ್ದು, 45,967 ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ 44,767 ಮತಗಳನ್ನು ಪಡೆದು ಕೊಂಡಿದ್ದಾರೆ.
ಕಾರವಾರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.