ನಿಧನ
ಅಂಕೋಲಾ : ಜಿ.ಸಿ.ಕಾಲೇಜಿನ ನಿವೃತ್ತ ನೌಕರ ಎಮ್.ಕೆ ನಾಯ್ಕ ಕೆಲಕಾಲದ ಅಸ್ವಸ್ಥತೆಯ ನಂತರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
3 ದಶಕಗಳ ಕಾಲ ಜಿ.ಸಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಸಹಾಯಕರಾಗಿ, ಕಾಲೇಜಿನ ಆಡಳಿತ ಕಛೇರಿಯ ಸಹಾಯಕರಾಗಿ ಹಾಗೂ ಜಿ.ಸಿ.ಕಾಲೇಜಿನ ಪಿ.ಯು ವಿಭಾಗದ ಆಡಳಿತ ಕಛೇರಿಯ ಅಧಿಕ್ಷಕರಾಗಿ ಅನುಪಮ ಸೇವೆ ಸಲ್ಲಿಸಿದ್ದು, ಸಿಬ್ಬಂದಿಗಳೊಂದಿಗೆ ಸೌಹಾರ್ದತೆಗೆ ಹೆಸರಾದವರು.
ನಿವೃತ್ತಿಯ ನಂತರ ಪುರಲಕ್ಕಿಬೇಣದ ರಾಯರ ಮಠದ ಆಡಳಿತ ಮಂಡಳಿಯ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.ಸಾಯಿ ಮಂದಿರದ ಆಡಳಿತ ಕಮಿಟಿ ಹಾಗೂ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಸಮಿತಿ ಸದಸ್ಯರು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.

RELATED ARTICLES  ಭಟ್ಕಳದಲ್ಲಿ ಮತ್ತೆ ಕೋರೋನಾ +Ve : ಜನತೆ ಮತ್ತೆ ಭಯದ ಗೂಡಿಗೆ…!