ಕಾರವಾರ: ತ್ರಿಕೋನ ಸ್ಪರ್ಧೆಯ ಕಣವಾಗಿದ್ದ ಶಿರಸಿ– ಸಿದ್ದಾಪುರ ಕ್ಷೇತ್ರದಲ್ಲಿ ಅಂತೂ ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೆ ಶಾಸಕರಾಗಿದ್ದಾರೆ. ಆ ಮೂಲಕ ಶಿರಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಅಂಕೋಲಾ ಕ್ಷೇತ್ರವಿದ್ದಾಗಲೂ ಮೂರು ಬಾರಿ ಶಾಸಕರಾಗಿದ್ದ ಅವರು, 2008 ಹಾಗೂ 2013ರಲ್ಲಿ ಶಿರಸಿಯ ಶಾಸಕರಾಗಿದ್ದರು. ದಶಕದಿಂದ ಅಧಿಕಾರ ಏಕಸ್ವಾಮ್ಯದಲ್ಲಿರುವ ಕಾರಣಕ್ಕೆ ವಿರೋಧಿ ಅಲೆ, ಜೊತೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಣದ ನೇರ ವಿರೋಧವನ್ನು ಕಾಗೇರಿ ಎದುರಿಸುತ್ತಿದ್ದರು.

RELATED ARTICLES  ಬ್ಯಾಂಕ್ ಖಾತೆಯಿಂದ 87 ಸಾವಿರ ರೂ. ಎಗರಿಸಿದ ಖಧೀಮರು..!

ಅಂತಿಮವಾಗಿ ಕಾಗೇರಿ 59,903 ಮತಗಳನ್ನು ಪಡೆದು ಕಾಂಗ್ರೆಸ್‌ನ ಭೀಮಣ್ಣ ನಾಯ್ಕರನ್ನು (41,558) 18,345 ಮತಗಳ ಅಂತರದಿಂದ ಸೋಲಿಸಿದ್ದಾರೆ. ತೃತೀಯ ಸ್ಥಾನದಲ್ಲಿ ಜೆಡಿಎಸ್‌ನ ಶಶಿಭೂಷಣ ಹೆಗಡೆ (21,459) ಇದ್ದಾರೆ.

RELATED ARTICLES  ರೋಟರಿಯಿಂದ ಸಾಧಕರಿಗೆ ಗೌರವ ಸಮರ್ಪಣೆ