ಹೊನ್ನಾವರ : ರಾಜಕಾರಣ ಎನ್ನುವುದು ಬರುತ್ತೆ ಹೋಗುತ್ತೆ ಹಲವು ಬುಡವಿಲ್ಲದ ಬೇರುಗಳು ಪ್ರತ್ಯಕ್ಷವಾಗುತ್ತದೆ. ಇದು ರಾಜಕಾರಣ ಅಲ್ಲ, ಹಿಂದೂ ಧರ್ಮದ ರಕ್ಷಣೆ ಆಗಬೇಕು. ಕಾಂಗ್ರೆಸ್ ಇದು ಕೆಟ್ಟ ಪರಂಪರೆ ಹಾಗೂ ಕೆಟ್ಟ ಸ್ವಭಾವ. ದೇಶ ವಿಭಜಿಸಿ ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಬಿಜೆಪಿ ಅಭ್ಯರ್ಥಿ ದಿನಕರಶೆಟ್ಟಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಪಟ್ಟಣದ ದುರ್ಗಾಕೇರಿ ದಂಡಿನದುರ್ಗಾ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಮಹಿಳಾ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿ ಬೋಲೋ ಭಾರತ ಮಾತಾಕೀ, ಮೋದಿ ಮೋದಿ ಎಂದು ಜೈಕಾರ ಹಾಕುತ್ತಾ ಮೇರವಣಿಗೆ ಪಟ್ಟಣದ ಬಾಜಾರ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಭರ್ಜರಿ ರೋಡ್ ಶೋ ನಡೆಸಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಶರಾವತಿ ವೃತ್ತದ ಬಳಿ ಮೇರವಣಿಗೆ ಮುಗಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಮಾತನಾಡಿ ಹಿಂದೂತ್ವವೇ ನಮಗೆ ಆಧಾರ. ನಮ್ಮ ಬದುಕು ಸಂಸ್ಕ್ರತಿ, ಸಂಸ್ಕಾರದ ಕೇಂದ್ರ. ಇಲ್ಲಿ ಕೆಲವರು ಹಿಂದೂತ್ವದ ಬಗ್ಗೆ ಅರಿವಿಲ್ಲದೇ ಢೋಂಗಿತನ ಮತ್ತು ಖೋಟಾ ಹಿಂದುವಾದವನ್ನು ಪ್ರದರ್ಶಿಸುತ್ತಿದ್ದಾರೆ. ಧರ್ಮಕ್ಕೋಸ್ಕರವೇ ಬದುಕಬೇಕು, ಧರ್ಮಕ್ಕೋಸ್ಕರವೇ ರಾಜಕಾರಣ ಮಾಡಬೇಕು ಅದನ್ನು ಬದುಕಿನಲ್ಲಿ ತೋರಿಸಿಕೊಡಬೇಕು. ನಮ್ಮ ಬದುಕು ನಾಲ್ಕು ಜನರ ಎದುರು ತಲೆ ಎತ್ತಿ ನಿಲ್ಲುವಂತಾಗಬೇಕು. ಮತವನ್ನು ಹಣಕ್ಕೇ ಮಾರಿಕೊಳ್ಳಬೇಡಿ. 70 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮತದಾರರಿಗೆ ಸರಾಯಿಕೊಟ್ಟು ಮಲಗಿಸಿದೆ, ಇದು ಅವರ ಪಾಪದ ಫಲ, ಇನ್ನು ನೀವು ಎಚ್ಚರಗೊಳ್ಳದಿದ್ದಲ್ಲಿ ನಿಮಗೆ ಉಳಿಗಾಲವಿಲ್ಲ ಎಂದರು.
ಅವರು ತಾಲೂಕಿನ ಎಲ್ಲಾ ಮತದಾರರಲ್ಲಿ ಈ ಬಾರಿ ನನ್ನನ್ನು ಗೆಲ್ಲಿಸಿ ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಮತಯಾಚಿಸಿ ಮಾತನಾಡಿದರು. ರೋಡ್ ಶೋ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕಾ ಅದ್ಯಕ್ಷ ಸುಬ್ರಾಯ ನಾಯ್ಕ, ಲೋಕೇಶ ಮೇಸ್ತ, ಉಮೇಶ ನಾಯ್ಕ, ಗಣೇಶ ಪೈ ,ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರೀ, ವಿಜು ಕಾಮತ್, ಉಮೇಶ ಸಾರಂಗ, ಕಮಲಾಕರ ಮೇಸ್ತ, ರುಕ್ಮಾಬಾಯಿ ಮೇಸ್ತ, ರಾಜೇಶ ಭಂಡಾರಿ, ಸುಬ್ರಹ್ಮಣ್ಯ ಶಾಸ್ತ್ರೀ, ಎಮ್.ಎಸ್.ಹೆಗಡೆ ಮತ್ತು ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.