ಕಾರವಾರ: ‘ಹಣ್ಣುಗಳ ರಾಜ’ ಎಂದೇ ಪ್ರಸಿದ್ಧವಾಗಿರುವ ಮಾವಿನ ಹಣ್ಣಿನ ಋತು ಆರಂಭವಾಗಿದ್ದು, ನಗರದ ಮಾರುಕಟ್ಟೆಗೆ ಹೇರಳವಾಗಿ ಆವಕವಾಗಿದೆ. ವ್ಯಾಪಾರಿಗಳ ಜೇಬು ಸಹ ತುಂಬುತ್ತಿದೆ.

ಈ ಜಿಲ್ಲೆಯಲ್ಲಿ ವಿಶೇಷವಾಗಿ ಬೆಳೆಯಲಾಗುವ ‘ಕರಿ ಇಶಾಡ್’ ತಳಿಯ ಮಾವಿನಹಣ್ಣಿಗೆ ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಅಂಕೋಲಾ ತಾಲ್ಲೂಕಿನ ಬೆಳಂಬರ, ಮುಂಡಗೋಡದ ಮಳಗಿ, ಶಿರಸಿಯ ಬನವಾಸಿಯಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ಈ ಹಣ್ಣಿಗೆ ಕಳೆದ ವಾರ ಸಂತೆಯಲ್ಲಿ ಪ್ರತಿ ಡಜನ್‌ಗೆ ₹450ವರೆಗೂ ದರವಿತ್ತು. ಈಗ ಹಣ್ಣಿನ ಆವಕ ಹೆಚ್ಚಿರುವ ಕಾರಣ ಹಾಗೂ ಮಳೆಯಾಗಿರುವ ಕಾರಣ ₹250ರ ಆಸುಪಾಸಿನಲ್ಲಿದೆ.

RELATED ARTICLES  ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ

‘ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಖರೀದಿ ಮಾಡಿದರೆ ಮತ್ತಷ್ಟು ಕಡಿಮೆ ದರಕ್ಕೆ ಕೊಡುತ್ತೇವೆ. ಕಾಯಿಗಳನ್ನು ಹಣ್ಣು ಮಾಡಲು ಯಾವುದೇ ರಾಸಾ ಯನಿಕವನ್ನು ಬಳಸಿಲ್ಲ. ಬಲಿತ ಕಾಯಿಗಳನ್ನು ಮರದಿಂದ ತಂದು ಒಣಹುಲ್ಲಿನಲ್ಲಿ ಇಟ್ಟಿದ್ದೇವೆ. ಅವು ನೈಸರ್ಗಿಕವಾಗಿ ಹಣ್ಣಾದರೇ ರುಚಿ ಜಾಸ್ತಿ. ಆರೋಗ್ಯಕ್ಕೂ ಉತ್ತಮ’ ಎನ್ನುತ್ತಾರೆ ಅವರ್ಸಾದ ವ್ಯಾಪಾರಿ. ಹಣ್ಣಿನ ದರ ಕಳೆದ ವರ್ಷ ₹100ರ ಆಸುಪಾಸಿನಲ್ಲಿತ್ತು. ಈ ವರ್ಷ ಬೆಳೆ ಕಡಿಮೆಯಾಗಿದ್ದಕ್ಕೆ ದರ ಜಾಸ್ತಿ ಎನ್ನುತ್ತಾರೆ ಅವರು.

RELATED ARTICLES  ಮನೆ ಗೋಡೆ ಕುಸಿದು ಮಹಿಳೆ ಅಸ್ವಸ್ಥ

ಗೋವಾ, ಮಹಾರಾಷ್ಟ್ರದಿಂದಲೂ ಮಾವಿನಹಣ್ಣುಗಳು ನಗರಕ್ಕೆ ಆವಕವಾಗಿವೆ. ಗಾಂಧಿ ಬಜಾರ್, ಸವಿತಾ ವೃತ್ತ, ಶಿವಾಜಿ ವೃತ್ತದಲ್ಲಿ ಆಪೂಸ್, ಬಾದಾಮ್, ಪಯರಿ, ಆಲ್ಫಾನ್ಸೋ, ಮಲ್‍ಗೋವಾ, ರಸಪುರಿ, ಬಂಗಾನಪಲ್ಲಿ, ಮಲ್ಲಿಕಾ, ತೋತಾಪುರಿ ಹೀಗೆ ವಿವಿಧ ತಳಿಗಳ ಹಣ್ಣುಗಳೂ ಇಲ್ಲಿ ಸಿಗುತ್ತಿವೆ.