ರಾಜ್ಯದಲ್ಲಿ ರಾಜಕೀಯ ನಾಟಕವೇ ನಡೆಯುತ್ತಿದ್ದು ಈ ಬಾರಿ ಚುನಾವಣೆಯಲ್ಲಿಯಾವುದೇ ಪಕ್ಷಕೆ ಬಹುಮತ ಬಾರದ ಹಿನ್ನೆಲೆಯಲ್ಲಿ ಒಂದೊಂದು ಶಾಸಕರ ಸ್ಥಾನವೂ ಅತ್ಯಂತ ಪ್ರಮುಖವಾಗಿದ್ದು ಪಕ್ಷೇತರ ಶಾಸಕ ಶಂಕರ್ ಇಂದು ಬಿಎಸ್‍ವೈ ಅವರ ಮನೆಯಲ್ಲಿ ಪ್ರತ್ಯೆಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು ಪಕ್ಷೇತರವಾಗಿ ನಿಂತು ಶಾಸಕರಾಗಿದ್ದ ಶಂಕರ್ ಅವರು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದು ಆ ಕುರಿತು ಮಾತನಾಡುವುದಕ್ಕೆ ಖುದ್ದು ಶಂಕರ್ ಅವರೇನೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಶಂಕರ್ ಅವರು ಕೆಎಸ್ ಈಶ್ವರಪ್ಪನವರ ಸಂಬಂಧಿಯಾಗಿದ್ದು ಅವರ ನೇತೃತ್ವದಲ್ಲಿಯೇ ಬಿಎಸ್‍ವೈ ಅವರ ಮನೆಗೆ ಕರೆತಂದಿದ್ದು ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES  ಉಪನ್ಯಾಸಕರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಲು ಉನ್ನತ ಶಿಕ್ಷಣ ಇಲಾಖೆ ಚಿಂತನೆ.!

ಮ್ಯಾಜಿಕ್ ನಂ ಗೆ, 7 ಸ್ಥಾನಗಳು ಬಿಜೆಪಿಗೆ ಬೇಕಿರುವ ಕಾರಣದಿಂದಾಗಿ ಈಗಾಗಲೇ ಖಸರತ್ತನ್ನು ಪ್ರಾರಂಭಿಸಿರುವ ಕಾರಣದಿಂದ ಕಾಂಗ್ರೆಸ್ ವಲಯದಲ್ಲಿ ಮಿಂಚಿನ ಸಂಚಲನ ಪ್ರಾರಂಭವಾಗಿದೆ. ಅದಕ್ಕಾಗಿಯೇ ಕಾಂಗ್ರೆಸ್ ಶಾಸಕರನ್ನು ಕೇರಳಕ್ಕೆ ಶಿಫ್ಟ್ ಮಾಡಲು ಡಿಕೆ ಶಿವಕುಮಾರ್ ಅವರಿಗೆ ಜವಾಬ್ದಾರಿ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES  ಮುರುಘಾ ಮಠದ ಶ್ರೀ ಅರೆಸ್ಟ್ ಆಗಿಲ್ಲ : ಗಾಳಿ ಸುದ್ದಿಗೆ ಕಿವಿ ಕೊಡಬೇಡಿ ಎಂದ ಶ್ರೀಗಳು

ಆದರೆ ಈ ಮಹಾ ಹೈ ಡ್ರಾಮ ಯಾವ ಹಂತಕ್ಕೆ ತಲುಪುತ್ತದೆ ಎಂದು ರಾಜ್ಯದ ಜನ ಕಾದು ನೋಡುತ್ತಿದ್ದಾರೆ.
ಈಗಾಗಲೇ ಆಪರೇಷನ್ ಕಮಲಕ್ಕೆ ಕೈ ಹಾಕಿರುವ ಬಿಜೆಪಿ ಅನೇಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಈಗಾಗಲೇ ಸಂಪರ್ಕ ಮಾಡುತ್ತಿದ್ದಾರೆ ಎನ್ನುವ ಮಾತರುಗಳು ಕೇಳಿ ಬರುತ್ತಿವೆ.