ಬಗೆಬಗೆಯ ಹಣ್ಣುಗಳನ್ನು ಸೇರಿಸಿ ಮಾಡುವ ಫ್ರೂಟ್ಸ್ ಸಲಾಡ್ ಆರೋಗ್ಯಕ್ಕೂ ಅತ್ಯುತ್ತಮ ಮತ್ತು ತಿನ್ನಲೂ ಇಷ್ಟವಾಗುತ್ತದೆ. ಈ ಸಲಾಡ್ ನಲ್ಲಿ ನಾವು ಆದಷ್ಟು ಎಲ್ಲಾ ಹಣ್ಣುಗಳನ್ನು ಮಿಕ್ಸ್ ಮಾಡಲು ಬಯಸುತ್ತೇವೆ.
ಆದರೆ ಇದು ತಪ್ಪು.. ಯಾಕೆಂದರೆ ಕೆಲವೊಂದು ಹಣ್ಣುಗಳನ್ನು ಜೊತೆಯಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಬನ್ನಿ, ಅಂತಹ ಹಣ್ಣುಗಳು ಯಾವುವು ಮತ್ತು ಅದರಿಂದಾಗುವ ಆರೋಗ್ಯ ಸಮಸ್ಯೆಗಳೇನು ಎಂದು ತಿಳಿದುಕೊಳ್ಳೋಣ!
ಜೀರ್ಣಕ್ರೀಯೆ ಸಮಸ್ಯೆ:
ಕಲ್ಲಂಗಡಿ, ಖರ್ಬೂಜ ಮುಂತಾದವುಗಳನ್ನು ಇತರ ಹಣ್ಣುಗಳ ಜೊತೆ ಸೇರಿಸಿ ತಿಂದರೆ ಜೀರ್ಣಕ್ರೀಯೆಯ ಸಮಸ್ಯೆ ಉಂಟಾಗುತ್ತದೆ. ಕಲ್ಲಂಗಡಿ ಮತ್ತು ಖರ್ಬೂಜದಲ್ಲಿ ಅಧಿಕ ನೀರಿನಂಶವಿರುವುದರಿಂದ ಇವು ಬೇಗ ಜೀರ್ಣವಾಗುತ್ತದೆ. ಆದ್ದರಿಂದ ಈ ಹಣ್ಣುಗಳನ್ನು ಬೇರೆ ಹಣ್ಣಿನ ಜೊತೆ ಸೇರಿಸಿ ತಿನ್ನುವುದರಿಂದ ಜೀರ್ಣ ಕ್ರೀಯೆ ನಿಧಾನವಾಗುವುದು.
ತಲೆಸುತ್ತು, ವಾಂತಿ:
ದ್ರಾಕ್ಷಿ, ಸ್ಟ್ರಾಬೆರಿ, ಪೀಚ್, ದಾಳಿಂಬೆ, ಸೀಬೆಕಾಯಿ ಮುಂತಾದ ಹಣ್ಣುಗಳನ್ನು ಬಾಳೆಹಣ್ಣಿನ ಜೊತೆ ಮಿಕ್ಸ್ ಮಾಡಿ ತಿನ್ನಬಾರದು. ಈ ಹಣ್ಣುಗಳಲ್ಲಿ ಆ್ಯಸಿಡಿಕ್ ಅಂಶವಿರುವುದರಿಂದ ಇದನ್ನು ಬಾಳೆಹಣ್ಣಿನ ಜೊತೆ ಸೇರಿಸಿ ತಿಂದರೆ ತಲೆಸುತ್ತು, ವಾಂತಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಎದೆಯುರಿ:
ಹಣ್ಣು ಮತ್ತು ತರಕಾರಿಗಳನ್ನು ಜೊತೆಯಾಗಿ ಯಾವಾಗಲೂ ಸೇವಿಸಬಾರದು. ಹಣ್ಣು ಬೇಗನೆ ಜೀರ್ಣವಾಗಿ ತರಕಾರಿ ಜೀರ್ಣವಾಗಲು ದೀರ್ಘ ಸಮಯ ತೆಗೆದುಕೊಳ್ಳುವುದು. ಇದರಿಂದ ಅಜೀರ್ಣ ಮತ್ತು ಎದೆಯುರಿ ಕಾಣಿಸಿಕೊಳ್ಳಬಹುದು. ಕಿತ್ತಳೆ ಮತ್ತು ಕ್ಯಾರೆಟ್ ಒಟ್ಟಿಗೆ ತಿಂದರೆ ಎದೆಯುರಿ ಸಮಸ್ಯೆ ಉಂಟಾಗಬಹುದು.
ಇನ್ನಷ್ಟು ಟಿಪ್ಸ್:
ಜೋಳ, ಆಲೂಗಡ್ಡೆ, ಬ್ರೋಕೋಲಿ, ಪಾಲಕ್ ಮುಂತಾದ ತರಕಾರಿಗಳ ಜೊತೆ ಬಾಳೆಹಣ್ಣು, ದ್ರಾಕ್ಷಿ ಮುಂತಾದವುಗಳನ್ನು ಮಿಕ್ಸ್ ಮಾಡಿ ತಿನ್ನಬಾರದು.
ಫ್ರೂಟ್ ಸಲಾಡ್ ಕೇವಲ 4 -5 ಬಗೆಯ ಹಣ್ಣುಗಳನ್ನು ಬಳಸಿದರೆ ಸಾಕು.
ರಾತ್ರಿ ಅಧಿಕ ಕಾರ್ಬೋಹೈಡ್ರೇಟ್ ಇರುವ ಆಹಾರ ತಿಂದರೆ ಬೆಳಗ್ಗೆ ಒಂದು ಸೇಬು ತಿನ್ನಿ, ಇದರಿಂದ ಕಾರ್ಬೋಹೈಡ್ರೇಟ್ಸ್ ಬ್ಯಾಲೆನ್ಸ್ ಆಗುತ್ತದೆ.
ಜಾಸ್ತಿ ಉಪ್ಪಿನಂಶವಿರುವ ಆಹಾರ ಸೇವಿಸಿದರೆ ಕಲ್ಲಂಗಡಿ, ಖರ್ಬೂಜದಂತಹ ಅಧಿಕ ನೀರಿರುವ ಹಣ್ಣುಗಳನ್ನು ಸೇವಿಸಿ.