ಸಿದ್ದಾಪುರ; ಇಲ್ಲಿಯ ಭಾನ್ಕುಳಿ ಶ್ರೀರಾಮದೇವ ಮಠದಲ್ಲಿ ನಡೆಯುತ್ತಿರುವ ಶ್ರೀರಾಘವೇಂದ್ರಭಾರತೀ ವಟು ಶಿಕ್ಷಣ ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳಿಗೆ ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ಶ್ರೀರಾಘವೇಶ್ವರಭಾರತೀ ಶ್ರೀಗಳು ಕಾಡು ಬೀಜಗಳನ್ನು ಅನುಗ್ರಹಿಸಿ ಪರಿಸರ ರಕ್ಷಣೆಗೆ ಕರೆ ನೀಡಿದರು.

ಭಾರತಿ ಸಂಪದ ವಡ್ಡಿನಗದ್ದೆ ಹಾಗೂ ಶ್ರೀರಾಮದೇವಮಠ ಭಾನ್ಕುಳಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಂಘಟಿಸಲಾಗಿದ್ದ “ಕಾಡುಬೀಜ (ಸಂ)ಗ್ರಹಿಸು, ಕಾಡು ಬೆಳೆಸು” ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ಶ್ರೀಗಳು ಭಾನ್ಕುಳಿ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ಗೋಸ್ವರ್ಗದ ಆವಾರದಲ್ಲಿ ಹಾಗೂ ಅಡಕೆ ತೋಟದ ಬದುವಿನಲ್ಲಿ ಗಿಡ್ಡತಳಿಯ ನೈಸರ್ಗಿಕ ತಳಿಗಳನ್ನು ಬೆಳೆಸುವಂತೆ ಕರೆನೀಡಿದರು. ಏಕನಾಯಕ,ಪನ್ನೇರಲದಂತಹ ಉತ್ತಮ ಗಿಡಗಳನ್ನು ಬೆಳೆಸಿ. ನೀವು ನಿರ್ಮಿಸುವ ಉದ್ಯಾನ ಮಾದರಿಯು ನಂದನವನವಾಗಿ ರೂಪುಗೊಳ್ಳಬೇಕು ಎಂದು ಹೇಳಿದ ಶ್ರೀಗಳು ನಂದನವನವನ್ನು ರೂಪಿಸಲು ಕಂಕಣಬದ್ಧರಾಗಿರುವ ಭಾರತೀ ಸಂಪದದ ಗಣಪತಿ ಹೆಗಡೆ ವಡ್ಡಿನಗದ್ದೆ, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕøತ ಎಂ.ಬಿ.ನಾಯ್ಕ ಕಡಕೇರಿ, ಪರಿಸರವಾದಿ ಹಕ್ರೆ ಸುಬ್ಬಣ್ಣ, ಪ್ರಮುಖ ಕಾರ್ಯಕರ್ತ ಗಣಪತಿ ಹೆಗಡೆ ಗುಂಜಗೋಡ ಅವರುಗಳಿಗೆ ಫಲಮಂತ್ರಾಕ್ಷತೆ ಅನುಗ್ರಹಿಸಿ ಆಶೀರ್ವದಿಸಿದರು.

RELATED ARTICLES  ಮುಖ್ಯಪ್ರಾಣನೆಡೆಗೆ ನಡೆದ ದೀವಗಿಯ ರಾಮಾನಂದರು

ವಟುಶಿಕ್ಷಣ ಶಿಬಿರದ ಪ್ರಮುಖರಾದ ವೇ. ಜಯರಾಮ ಭಟ್ಟ ಗುಂಜಗೋಡ, ವೇ.ಪ್ರಮೋದ ಭಟ್ಟ ಹೆಗ್ಗಾರಳ್ಳಿ, ವೇ. ರಾಮಚಂದ್ರ ಭಟ್ಟ ಕಲ್ಲಾಳ, ಪೂರ್ಣಿಮಾ ಭಟ್ಟ ಗಡಿಹಿತ್ಲು ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಹೆಗಡೆಯ ವಿಪ್ರ ಒಕ್ಕೂಟದಿಂದ ಸಾಧಕರಿಗೆ ಸನ್ಮಾನ.