ಕುಮಟಾ: ರಾಜಧಾನಿಯಲ್ಲಿ ರಾಜಕಾರಣ ಕ್ಷಣಕ್ಕೊಂದು ತಿರುವು ಪಡಯುತ್ತಿದ್ದದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕೆಲವು ದೃಶ್ಯ ಮಾಧ್ಯಮಗಳು ತಮ್ಮ ಬಗ್ಗೆ ಅನಾವಶ್ಯಕ ವಾಗಿ ಉಹಾಪೋಹದ ವರದಿ ಪ್ರಕಟಿಸುತ್ತಿದ್ದಾರೆಂದು ದಿನಕರ‌ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ದಿನಕರ ಶೆಟ್ಟಿಯವರ ಸಂಪರ್ಕದಲ್ಲಿ ಕುಮಾರಸ್ವಾಮಿ ಎಂದೆಲ್ಲಾ ಪ್ರಸಾರ ಮಾಡುತ್ತಿದ್ದು ನಮಗೆ ತೀರಾ ನೋವು ತಂದಿದೆ, ಎಂದಿರುವ ಅವರು ತಾನು ಉತ್ತಮ ಕುಟಂಬದವನಾಗಿದ್ದು ತಾನು ಸ್ವಾಭಿಮಾನದಿಂದ ಬದುಕು ನಡೆಸಿದ್ದೇನೆ, ಹಲವು ವರ್ಷಗಳಿಂದ ರಾಜಕಾರಣದಲ್ಲಿ ಇದ್ದು ದುಡ್ಡಿನ ಹಿಂದೆ ಹೋಗುವಂತ ಬುದ್ದಿ ನನಗೆ ದೇವರು ಎಂದೂ ಕೊಟ್ಟಿಲ್ಲ ಎಂದರು.

RELATED ARTICLES  ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವ.

‌‌ ನಾನೂ ಬಿಜೆಪಿಯಲ್ಲೇ ಇದ್ದೇನೆ ಬಿಜೆಪಿ ನನಗೆ ಜೀವನದಲ್ಲೇ ಕಂಡರಿಯದ ಗೌರವವನ್ನ ನೀಡಿದೆ, ನನಗೆ ಟಿಕಟ್ ನೀಡಿ ನನ್ನ ಮೇಲೆ ವಿಶ್ವಾಸವಿಟ್ಟಿದೆ, ಆ ನಂಬಿಕೆಯನ್ನ ಎಂದೂ ಕಳೆದುಕೊಳ್ಳುವ ಕೆಲಸವನ್ನ ಮಾಡುವುದಿಲ್ಲಾ ಎಂದಿರುವ ದಿನಕರ‌ ಶೆಟ್ಟಿ ನನ್ನ ಕ್ಷೇತ್ರದ ಜನತೆ ನನಗೆ 59 ಸಾವಿರಕ್ಕೂ ಹೆಚ್ಚು ಮತನೀಡಿ 32 ಸಾವಿರಕ್ಕೂ ಹೆಚ್ಚು ದಾಖಲೆ ಅಂತರದಿಂದ ನನ್ನನ್ನ ಗೆಲ್ಲಿಸಿದ್ದಾರೆ ಸಾವಿರ ಸಾವಿರ ಕಾರ್ಯಕರ್ತರು ಅಭಿಮಾನಿಗಳು ನನ್ನ ಗೆಲುವಿಗಾಗಿ ಶ್ರಮಿಸಿದ್ದಾರೆ, ಹಿರಿಯ ಕಿರಿಯ ಮುಖಂಡರು ಸಹಕಾರ ನೀಡಿದ್ದಾರೆ ಹಾಗಾಗಿ ಯಾವ ಕಾರಣಕ್ಕೂ ಅವರಿಗೆ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲಾ ಎಂದಿದ್ದಾರೆ.

RELATED ARTICLES  ಆಶಾ ಕಾರ್ಯಕರ್ತೆಯರಿಗೆ ನೆರವಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಭಕ್ತರು ಹಾಗೂ ಆಡಳಿತ ಮಂಡಳಿ.

ಬಿಜೆಪಿಯ ಹಿರಿಯ ಮುಖಂಡರ ಪರವಾನಿಗೆ ಪಡೆದು ಕುಮಟಾಕ್ಕೆ ಆಗಮಿಸಿದ್ದು ಇಂದೇ ಮತ್ತೆ ಬೆಂಗಳೂರಿಗೆ ತೆರಳಿ ನಾಳೆ ನಡೆಯುವ ವಿಶ್ವಾಸಮತದಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ ಮಾಧ್ಯಮದಲ್ಲಿ ಪ್ರಸಾರವಾದ ತಮ್ಮ ಕುರಿತಾದ ಸುಳ್ಳು ಸುದ್ದಿಯನ್ನ ಬಲವಾಗಿ ಖಂಡಿಸಿದ ಅವರು ಬಿಜೆಪಿಯಲ್ಲಿಯೇ ಇದ್ದೇನೆ. ಹಾಗೆಯೇ ಇರುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದರು.