ಹೊನ್ನಾವರ : ಪಟ್ಟಣಕ್ಕೆ ಹತ್ತಿರ ಇರುವ ರಾಮತೀರ್ಥದ ಸಮೀಪ ಜನವಸತಿಯ ಬಳಿ ಸರ್ವೆ ನಂ:517/ಸಿ ಹಿಕ್ಸಾ 4 ರಲ್ಲಿ ಗ್ಯಾಸ್ ಸಿಲಿಂಡರ್ ಗೋಡೋನ್ ನಿರ್ಮಿಸಲು ನಿಯಮ ಬಾಹಿರವಾಗಿ ಅನುಮತಿ ನೀಡಿದ್ದರಿಂದ ಉಪಲೋಕಾಯುಕ್ತರು ಸ್ಥಳೀಯ ದೂರುದಾರರ ಅರ್ಜಿಯನ್ನು ಕುಲಂಕುಶವಾಗಿ ಪರಿಶೀಲಿಸಿ ನೀಡಿದ ತೀರ್ಪಿನಂತೆ ನಾಲ್ಕು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಸರಕಾರದ ಅಧೀನ ಕಾರ್ಯದರ್ಶಿ ಕೆ.ಎಲ್.ಬಾಗಲವಾಡೆ ಆದೇಶಿಸಿದ್ದಾರೆ.

ಹೊನ್ನಾವರ ಪಟ್ಟಣ ಪಂಚಾಯತ್‍ನ ಹಿಂದಿನ ಮುಖ್ಯಾಧೀಕಾರಿ ಎನ್.ಎಸ್.ಪೇಂಡ್ಸ್, ಕಿರಿಯ ಅಭಿಯಂತರ ಉಮೇಶ್ ಮಡಿವಾಳ, ಶಕುಂತಲಾ ಎಸ್.ನಾಯಕ್ ಮತ್ತು ಲೀನ ಬ್ರಿಟ್ಟೋ ಹಿಂದಿನ ಮುಖ್ಯಾಧಿಕಾರಿ ಈ ನಾಯ್ಕು ಜನರ ಮೇಲೆ ಕೆ.ಸಿ.ಎಸ್(ಸಿಸಿಎ) 1957 ನಿಯಮ 8 ಅನ್ವಯ ನಾಲ್ಕು ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತ ಪರಿಣಾಮ ಸಹಿತ ತಡೆಯಿಡಿಯುವ ದಂಡನೆಯನ್ನು ವಿಧಿಸಿ ಆದೇಶಿಸಲಾಗಿದೆ.

RELATED ARTICLES  ಚೆಸ್ ನಲ್ಲಿ ಮತ್ತೆ ಮಿಂಚಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿಕಿತಾ ಕಾಮತ್!

ಗೋಡೋನ್ ಪಕ್ಕದಲ್ಲಿ ಜನವಸತಿ ಇದ್ದು ಅವರಿಂದ ನಿರಪೇಕ್ಷಣಾ ಪತ್ರ ಪಡೆಯದೇ ಜಿಲ್ಲಾಧಿಕಾರಿಗಳಿಂದ ಸ್ಫೋಟಕ ಅಧಿನಿಯಮ 2008 ರ ನಿಯಮ 101 ಉಪನಿಯಮ(2) ಅನ್ವಯ ಅನುಮೋದನೆ ಪಡೆಯದೆ ಲೋಕೋಪಯೋಗಿ ಇಲಾಖೆ, ಅಗ್ನಿಶಾಮಕ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಪಡೆಯದೇ ಅನುಮತಿ ನೀಡಿರುತ್ತಾರೆ. ಇದೇ ಪ್ರದೇಶದಲ್ಲಿ 110 ಕೆವಿ ಹೈ-ಟೆನ್‍ಷನ್ ವಿದ್ಯುತ್‍ಚಕ್ತಿಯ ಲೈನ್‍ಗಳು ಹಾದು ಹೋಗಿರುತ್ತವೆ. ಅಲ್ಲದೇ ಅಗ್ನಿ ನಂದಕಗಳಿಗೆ ಬರಲು ನಿಯಮದಂತೆ ಸಂಗ್ರಹಗಾರಕ್ಕೂ ಮುಖ್ಯರಸ್ತೆಗೂ 7 ಮೀ ಅಗಲದ ರಸ್ತೆ ಸಂಪರ್ಕ ಇರುವುದಿಲ್ಲ.

ರಾಘವೇಂದ್ರ ವಿಠಲ ನಾಯ್ಕ ಇವರು ಶೇ50 ಅಂಗವಿಕಲ ಎಂಬ ಸರ್ಟಿಫಿಕೇಟ್ ಪಡೆದು ಸರಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆತನಿಗೆ ಶೇ.15 ಅಂಗವಿಕಲತೆ ಕೂಡಾ ಇಲ್ಲ ಎಂದು ಜನರೇ ಆಡಿಕೊಳ್ಳುತ್ತಿದ್ದಾರೆ. ಇದರ ಆರ್ಥಿಕತೆಯ ಹಿನ್ನಲೆಯಲ್ಲಿ ಆರ್.ಪಿ.ನಾಯ್ಕ ಕಾರವಾರ ಎ.ಡಬ್ಲ್ಯೂ.ಇ ಜಿಲ್ಲಾ ಯೋಜನಾ ನಿರ್ದೇಶಕ ಡಿಯುಡಿಸಿ ಇದ್ದಾರೆ. ಇವರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಖಾತೆಗೆ ರಾಘವೇಂದ್ರ ನಾಯ್ಕ ಹಾಡುಹಗಲೇ ಹಣ ತುಂಬುವುದು ಮಾಡುತ್ತದ್ದನೆನ್ನುವ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಆರ್.ಪಿ.ನಾಯ್ಕರ ಬೇನಾಮಿ ಆಸ್ತಿಯನ್ನು-ವ್ಯವಹಾರಗಳನ್ನು ರಾಘವೇಂದ್ರ ನಾಯ್ಕ ನೋಡಿಕೊಳ್ಳುತ್ತಿದ್ದು, ಪಟ್ಟಣ ಪಂಚಾಯತ್‍ನ ದುರ್ಬಲ ಅಧಿಕಾರಿಗಳಿಗೆ ಆಮೀಷವೊಡ್ಡಿ ಈ ಕೆಲಸ ಮಾಡಿಸಿದ್ದಾರೆ.

RELATED ARTICLES  ಶ್ರೀ ದೇವಪ್ಪಜ್ಜ ಸ್ವಾಮಿಗಳಿಗೆ "ಗೋಕರ್ಣ ಗೌರವ"

ಸರಕಾರ ಎರಡನೇ ಕಾರಣ ಕೇಳುವ ನೋಟಿಸ್ ದಿ 13-04-2017 ರಂದು ಜಾರಿ ಮಾಡಿದಾಗ ಪ್ರತಿಯೊಬ್ಬರು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹೇಳಿಕೆ ನೀಡಿದ್ದರೂ ಅಪರಾಧಿಗಳು ಶಿಕ್ಷೆಯಿಂದ ಪಾರಾಗಲು ಸಾಧ್ಯವಾಗಿಲ್ಲ. ದಾಖಲೆಗಳ ಪ್ರಕಾರ ಕರ್ತವ್ಯ ನಿರ್ಲಕ್ಷ್ಯತೆ ಮತ್ತು ದುರ್ನಡತೆ ಎಸಗಿರುವುದು ಸಾಬೀತಾಗಿರುವುದರಿಂದ ಸರ್ಕಾರಿ ನೌಕರರಿಗೆ ತಕ್ಕದಲ್ಲದ ರೀತಿಯಲ್ಲಿ ವರ್ತಿಸಿರುವುದರಿಂದ ಶಿಸ್ತು ಕ್ರಮಕ್ಕೆ ಅರ್ಹರಾಗಿರುತ್ತಾರೆ ಎಂದು ಆದೇಶ ನೀಡಲಾಗಿದೆ.