ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿಯಲ್ಲಿ ಆಯೋಜಿಸಿದ್ದ ಉಪ್ಪಿನಕಾಯಿ ಮೇಳ ಹಾಗೂ ಕಿಡ್ಸ್ ಫನ್ ಡೇ ಕಾರ್ಯಕ್ರಮ ನೂರಾರು ಮಕ್ಕಳ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ಸು ಕಂಡಿತು. ಕೆ.ಎಮ್.ಎಫ್. ಧಾರವಾಡದ ನಿರ್ದೇಶಕರುಗಳಾದ ಶ್ರಿ ಬಸವರಾಜ ಎನ್. ಅರಬಗೊಂಡ ಮತ್ತು ಶ್ರೀ ಸುರೇಶ್ಚಂದ್ರ ಹೆಗಡೆ ಕೆಶಿನಮನೆ ಹಾಗೂ ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ಮೇಳಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ಮಾತನಾಡಿ ಗ್ರಾಮೀಣ ಭಾಗದ ಮಹಿಳೆಯರು ಮನೆಯಲ್ಲಿ ತಯಾರಿಸಿದ ಉಪ್ಪಿಕಾಯಿಗಳ ಪ್ರದರ್ಶನ ಹಾಗೂ ಮಾರಾಟದ ಸಲುವಾಗಿ ಈ ವೇದಿಕೆಯನ್ನು ಕಲ್ಪಿಸಲಾಗಿದೆ. ಮತ್ತು ಮಕ್ಕಳಿಗೆ ರಜಾದಿನದಲ್ಲಿ ಬೇಸರ ಕಳೆಯುವ ಸಲುವಾಗಿ ಈ ರೀತಿಯ ಮನೋರಂಜನೆಯ ಜತೆ ಕಲಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ವಿವಿಧ ರೀತಿಯ ಮೇಳಗಳನ್ನು ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಶ್ರೀ ವಿ.ವಿ.ಜೋಶಿ ಬಾಳೇಹದ್ದ, ಶ್ರೀ ಆರ್.ಆರ್. ಹೆಗಡೆ ಐನಕೈ, ಶ್ರೀ ಸಿ.ಎನ್. ಹೆಗಡೆ ಹೂಡ್ಲಮನೆ. ಶ್ರೀ ಆರ್. ಜೆ. ಹೆಗಡೆ ಹಿರೇಕೈ, ಶ್ರೀ ವಿ.ಆರ್. ಭಟ್ಟ ಬಿಸಲಕೊಪ್ಪ, ಶ್ರೀ ಕೆ.ಎಮ್. ಹೆಗಡೆ ಅಬ್ರಿ ಹೀಪ್ನಳ್ಳಿ, ಹಾಗೂ ಶ್ರೀ ಎನ್. ವಿ. ಜೋಶಿ ಕೊಪ್ಪಲತೋಟ ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರವೀಶ ಹೆಗಡೆ, ಟಿ.ಎಸ್.ಎಸ್. ಸಿಬ್ಬಂದಿವರ್ಗ ಹಾಗೂ ಕಾರ್ಯಕ್ರಮದ ಕೇಂದ್ರ ಬಿಂದುವಾದ ಪುಟಾಣ ಮಕ್ಕಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಸಂಘವು ಆಯೋಜಿಸಿದ್ದ ಉಪ್ಪಿನಕಾಯಿ ಮೇಳದಲ್ಲಿ 28 ಸ್ಪರ್ಧಾಳುಗಳು ಭಾಗವಹಿಸಿದ್ದು, ತಾವು ತಯಾರಿಸಿದ ವಿವಿಧ ಬಗೆಯ 70ಕ್ಕೂ ಹೆಚ್ಚಿನ ಉಪ್ಪಿನಕಾಯಿಗಳ ಪ್ರದರ್ಶನ ಹಾಗೂ ಮಾರಾಟ ಮಾಡಿದರು. ಸಾಂಪ್ರದಾಯಿಕ ಉಪ್ಪಿನಕಾಯಿ ತಯಾರಿಸಿದ ಶ್ರೀಮತಿ ಶ್ರೀಮತಿ ಶ್ರೀಪಾದ ಹೆಗಡೆ ಗದ್ದೆಮನೆ ಹೆಗಡೆಕಟ್ಟಾ-ಪ್ರಥಮ, ಶ್ರೀ ವಿನಾಯಕ ನಾರಾಯಣ ಹೆಗಡೆ ತಟ್ಟಗುಣ -ದ್ವಿತೀಯ, ಹಾಗೂ ಡಾ. ಸುಮನ್ ದಿನೇಶ ಹೆಗಡೆ ಶಿರಸಿ-ತೃತೀಯ ಬಹುಮಾನ ಪಡೆದರೆ, ಇತರೇ ಉಪ್ಪಿನಕಾಯಿ ಸ್ಪರ್ಧೆಯಲ್ಲಿ ಶ್ರೀಮತಿ ವಸುಮತಿ ಉಮೇಶ ಭಟ್ಟ್ ಹೊಸಳ್ಳಿ-ಪ್ರಥಮ, ಶ್ರೀಮತಿ ಗಂಗಾ ನಾರಾಯಣ ಹೆಗಡೆ ವರ್ಗಾಸರ-ದ್ವಿತೀಯ, ಹಾಗೂ ಶ್ರೀಮತಿ ಸರಸ್ವತಿ ಜಿ. ಹೆಗಡೆ ಹೆಗಡೆಕಟ್ಟಾ–ತೃತೀಯ, ಬಹುಮಾನ ಪಡೆದರು. ನಿರ್ಣಾಯಕರುಗಳಾಗಿ ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕರಾದ ಶ್ರೀಮತಿ ರೂಪಾ ಪಾಟೀಲ್, ಕಾಕಲ್ ಉಪ್ಪಿನಕಾಯಿ ಸಾಗರ ಇದರ ಮಾಲಿಕರಾದ ಶ್ರೀ ಗಣೇಶ ಕಾಕಲ್, ಹಾಗೂ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿಯಾದ ಶ್ರೀಮತಿ ನಾಜನೀನ್ ಶೇಖ್ ಇವರುಗಳು ಕಾರ್ಯನಿರ್ವಹಿಸಿದರು.
ಬೇಸಿಗೆ ರಜೆಯಲ್ಲಿರುವ ಮಕ್ಕಳಿಗೆ ಮನರಂಜನೆ-ಮನೋವಿಕಾಸದ ಸಲುವಾಗಿ ಆಯೋಜಿಸಿದ್ದ ಕಿಡ್ಸ್ ಫನ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 150 ಮಕ್ಕಳಿಗೆ ಗಾಳಿಪಟ ತಯಾರಿಸುವ ಕುರಿತು ಶ್ರಿ ಪ್ರಶಾಂತ ಶೇಟ್ ಇವರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಶ್ರೀ ಜಿ.ಎಮ್. ಬೊಮ್ನಳ್ಳಿ ಇವರು ಚಿತ್ರ ಬಿಡಿಸುವುದರ ಮೂಲಕವಾಗಿ ಚಿತ್ರಕಲೆಯ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಗೆ ಟಿ.ಎಸ್.ಎಸ್. ನ ವಿವಿಧ ವಿಭಾಗಗಳ ಕಿರು ಪರಿಚಯ ಮಾಡಿಸಲಾಯಿತು. ನಂತರ ಉರಗ ತಜ್ಞ ಶ್ರೀ ಪ್ರಶಾಂತ್ ಹುಲೇಕಲ್ ಇವರು ವಿವಿಧ ಜಾತಿಯ ಹಾವುಗಳ ಬಗ್ಗೆ ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಮಕ್ಕಳ ಮನರಂಜನೆಗಾಗಿ ವಿವಿಧ ಗುಂಪು ಆಟಗಳನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಕೆಂಪೇಗೌಡ ಪ್ರಶಸ್ತಿ ವಿಜೇತರಾದ ಶ್ರೀ ಸುರೇಶ ಬಾಬು ಅವರ ಜಾದೂ ಪ್ರದರ್ಶನ ಇಲ್ಲಿ ಸೇರಿರುವ ಎಲ್ಲಾ ಮಕ್ಕಳ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಉಡುಗೊರೆ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
.