ಕುಮಟಾ: ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ತಾಲೂಕಿನ ಅಂತ್ರವಳ್ಳಿ ಗ್ರಾ.ಪಂ ವ್ಯಾಪ್ತಿಯ ಬರಗದ್ದೆಯಲ್ಲಿ ವಿದ್ಯುತ್ ದಿವಸಗಟ್ಟಲೆ ವ್ಯತ್ಯಯವಾಗುತ್ತದೆ. ಇಡೀ ರಾತ್ರಿ ವಿದ್ಯುತ್‌ದ ನಿರೀಕ್ಷೆಯಲ್ಲಿ ಹತಾಶಗೊಂಡು ಜನ ನಿದ್ರೆಗೆ ಜಾರುತ್ತಾರೆ. 

ವಿದ್ಯುತ್ ಸಮಸ್ಯೆಗಳಿಂದ ಬೇಸತ್ತ ಜನ ಅನೇಕ ಸಲ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ,ಪ್ರಯೋಜನವಾಗಿಲ್ಲ. ಅದಲ್ಲದೆ ಮಳೆಗಾಲ ‌ಪೂರ್ವ ಮುನ್ನೆಚ್ಚಿಕೆಯ ಕ್ರಮಗಳ ಬಗ್ಗೆಯೂ ಇಲಾಖೆ ಕ್ರಮ ಕೈಗೊಳ್ಳದಿರುವುದು ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.

RELATED ARTICLES  ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ಇನ್ನಿಲ್ಲ.

ದಿನವಿಡೀ ವಿದ್ಯುತ್ ವ್ಯತ್ಯಯ ಪರಿಹಾರ ಹಾಗೂ ಮಳೆಗಾಲ ಪೂರ್ವ ವಿದ್ಯುತ್ ತಂತಿಗೆ ತಾಗುವ ಮರಗಳ ಕಟಾವು ಮಾಡುವಂತೆ ಹೆಸ್ಕಾಂ ಕಛೇರಿಗೆ ಬರಗದ್ದೆ ಗ್ರಾಮಾಭಿವೃದ್ಧಿ ಸಂಘದವರು ಮನವಿ ನೀಡಿದ್ದಾರೆ.

RELATED ARTICLES  ಸಾಹಸ ಸಾಧನೆಯ ಮಾರ್ಗ: ರಾಘವೇಶ್ವರ ಶ್ರೀ

ಮನವಿಯಲ್ಲಿ 3ದಿನಗಳ ಗಡುವು ನೀಡಿದ್ದು ಸಮಸ್ಯೆ ಪರಿಹಾರ ಆಗದ ಸಂದರ್ಭದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಎನ್ ಎಸ್ ಹೆಗಡೆ, ಬಾಲಚಂದ್ರ ಶಾಸ್ತ್ರಿ, ಪ್ರದೀಪ ಹೆಗಡೆ, ಗಜಾನನ ಹೆಗಡೆ, ಭರತ್ ಉಪಾಧ್ಯಾಯ, ಸುದರ್ಶನ ಹೆಗಡೆ, ಗೌರೀಶ ಶಾಸ್ತ್ರಿ ಮುಂತಾದವರು ಹಾಜರಿದ್ದರು.